ಯಲ್ಲಾಪುರ: ಮಂಜುನಾಥ ನಗರದಲ್ಲಿ ಬುಧವಾರ ಹಳೆಯ ಮನೆಯ ಗೋಡೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲೆ ಕುಸಿದಿದೆ.
ಬೀಮವ್ವ ಬೋವಿ ವಡ್ಡರ್ ಎಂಬಾತರ ಮಣ್ಣಿನ ಮನೆ ಮಳೆಗೆ ಕುಸಿತ ಕಂಡಿದೆ. ಅವರ ಮನೆಯ ಗೋಡೆ ಮಣಿಕಂಠ ಉಣಕಲ್ ಎಂಬಾತರು ನಿರ್ಮಿಸುತ್ತಿದ್ದ ಕಟ್ಟಡದ ಮೇಲೆ ಬಿದ್ದಿದೆ. ಆ ವಾರ್ಡಿನ ಪ ಪಂ ಸದಸ್ಯ ಸತೀಶ ನಾಯ್ಕ ಈ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
Discussion about this post