ಕಾರವಾರ: ಚೆಂಡಿಯಾದ ಅನೀಲ ರಾಘೋಬ (65) ಎಂಬಾತರು ಜಾನುವಾರುಗಳ ರಕ್ಷಣೆಗೆ ತೆರಳಿ ಸಾವನಪ್ಪಿದ್ದಾರೆ.
ನೆರೆ ಪ್ರವಾಹದಿಂದಾಗಿ ಚೆಂಡಿಯಾ ಬಳಿಯ ಇಡೂರಿನಲ್ಲಿ ನೀರು ತುಂಬಿದ್ದು, ಜಾನುವಾರುಗಳು ತೊಂದರೆಯಲ್ಲಿದ್ದವು. ಇದನ್ನು ಗಮನಿಸಿದ ಅನೀಲ್ ಮೂಕ ಜೀವಿಗಳ ರಕ್ಷಣೆಗೆ ಧಾವಿಸಿದ್ದರು. ನೀರಿನಲ್ಲಿದ್ದ ಹಸುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಾಗ ಸಾವನಪ್ಪಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಅಮಾಯಕನ ಜೀವ ಬಲಿಯಾಗಿರುವುದಕ್ಕೆ ಊರಿನವರು ಆಕ್ರೋಶ ವ್ಯಕ್ತಪಡಿಸಿದರು.
Discussion about this post