ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಜೊಯಿಡಾದ ಅಪ್ಪರ ಕಾನೇರಿ ಜಲಾಶಯದ ಹಿನ್ನೀರಿನಲ್ಲಿ ಬರುವ 6 ಗ್ರಾಮದ 113 ಕುಟುಂಬದವರು ಅತಂತ್ರರಾಗಿದ್ದಾರೆ. ಇಲ್ಲಿನ 565 ಜನ ನಡುಗಡ್ಡೆಯಲ್ಲಿ ಸಿಲುಕಿದ್ದು, ಪ್ರಸ್ತುತ ಕಲೋಲಿ ಗ್ರಾಮದವರ ಅನುಕೂಲಕ್ಕೆ ಒಂದು ದೋಣಿ ವ್ಯವಸ್ಥೆ ಮಾಡಲಾಗಿದೆ. ಉಳಿದ ನಾಲ್ಕು ಗ್ರಾಮದವರು ಗಾಳಿ-ಮಳೆ-ಚಳಿಗೆ ನಡುಗಿದ್ದಾರೆ.
ಕಾಳಿ ಯೋಜನೆಯ ಮೊದಲ ಹಂತದಲ್ಲಿ ನಿರ್ಮಾಣವಾದ ಅಪ್ಪರ್ ಕಾನೇರಿ ಜಲಾಶಯ ಪ್ರದೇಶದಲ್ಲಿ 185 ಮಿ.ಮೀ ಮಳೆ ದಾಖಲಾಗಿದೆ. ಕಾನೇರಿ, ಆದಗವ, ಕೆಲೋಲಿ, ಕುಂಡಲ, ಕುಮಗಾಳ ನದಿಗಳು ಉಕ್ಕಿ ಹರಿದಿವೆ. ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಳವಾಗಿದ್ದು, ಜಲಾಶಯದ ಹಿನ್ನೀರಿನಲ್ಲಿ ಬರುವ ಗ್ರಾಮವಾದ ಕುಂಡಲ, ಕುರಾವಲಿ, ಕೆಲೋಲಿ, ಆದಗೋವ, ಘಟ್ಟಾವ, ದೇವಸ್‌ನವರ ಗ್ರಾಮಸ್ಥರ ಸಂಪರ್ಕ ಕಡಿತವಾಗಿದೆ.
ಕುಂಡಲ ಸೇತುವೆ ಮತ್ತು ಕೇಲೋಲಿ ಗ್ರಾಮದ ಸಂಪರ್ಕಕೊoಡಿಯಾದ ಕಾಲು ಸೇತುವೆ ಮುಳುಗಿದೆ. ಇದರಿಂದ ಕೇಲೋಲಿ ಗ್ರಾಮದ 35 ಕುಟುಂಬದ 155 ಜನ ನಡುಗಡ್ಡೆಯಲ್ಲಿದ್ದಾರೆ. ಕುಂಡಲ್ ಗ್ರಾಮದ 40 ಮನೆಗಳ 200 ಜನ, ಕುರಾವಳಿ ಗ್ರಾಮದಲ್ಲಿ 18 ಮನೆಗಳ 90 ಜನ, ಘಟ್ಟಾವ ಗ್ರಾಮದ 10 ಮನೆಗಳ 75 ಜನ, ನವರ ಗ್ರಾಮದ 10 ಮನೆಗಳಲ್ಲಿನ 60 ಜನ ನೀರ ನಡುವೆ ಸಿಲುಕಿಕೊಂಡಿದ್ದಾರೆ.




Discussion about this post