ಕಾರವಾರ: ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಭಾರೀ ಗಾತ್ರದ ಹಡಗಿನಲ್ಲಿ ಅಗ್ನಿ ಅವಘಡ ನಡೆದಿದೆ. ದೊಡ್ಡ ದೊಡ್ಡ ಕಂಟೇನರ್’ಗಳನ್ನು ಹೊತ್ತು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ ತಗುಲಿದೆ.
ಈ ಹಡಗು ಮಲೆಶಿಯಾದಿಂದ ಹೊರಟಿತ್ತು. ಕಾರವಾರದಿಂದ 50 ನಾಟಿಕಲ್ ಮೈಲಿ ದೂರದಲ್ಲಿ ಹಡಗು ಸಂಚರಿಸುತ್ತಿತ್ತು. ಎಲ್ಲವೂ ಸರಿಯಾಗಿದ್ದರೆ ಜು 21ಕ್ಕೆ ಈ ಹಡಗು ಶ್ರೀಲಂಕಾ ತಲುಪಬೇಕಿತ್ತು. ಆದರೆ, ಜು 20ರಂದು ಕಾರವಾರದಲ್ಲಿ ಅಗ್ನಿ ಅವಘಡ ನಡೆದಿದ್ದು, ರಕ್ಷಣಾ ಕೆಲಸ ನಡೆಯುತ್ತಿದೆ. ಭಾರತೀಯ ತಟರಕ್ಷಕ ಪಡೆ, ಬಂದರು ಇಲಾಖೆಯವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನೆರಡು ಹಡಗು ಹಾಗೂ ಹೆಲಿಕಾಪ್ಟರ್ ಬಳಸಿ ಬೆಂಕಿ ಆರಿಸುವ ಪ್ರಯತ್ನ ನಡೆದಿದೆ. `ಎಂ ವಿ ಮಾರ್ಸ್ಕ ಫ್ರಾಂಕ್ ಫರ್ಟ’ ಕಂಪನಿಗೆ ಸೇರಿದ ಹಡಗು ಇದಾಗಿದೆ.
Discussion about this post