ಉತ್ತರ ಕನ್ನಡ ಜಿಲ್ಲೆಯ ಅಜ್ಞಾತ ಜಲಪಾತಗಳಲ್ಲಿ ಹೊಸದೇವತಾ ಜಲಪಾತ ಸಹ ಒಂದು. ಅಂಕೋಲಾ ತಾಲೂಕಿನ ವಾಸರ ಕುದ್ರಿಗೆಯಲ್ಲಿರುವ ಈ ಜಲ ಈಚೆಗೆ ಮುನ್ನೆಲೆಗೆ ಬಂದಿದೆ. ಜಲಪಾತದ ಆವರಣದಲ್ಲಿಯೇ ದೇವರ ಸನ್ನಿಧಿ ಇರುವುದು ಇಲ್ಲಿನ ಇನ್ನೊಂದು ವಿಶೇಷ.
ಗಂಗಾವಳಿ ಸೇತುವೆ ಸಮೀಪದ ಕೋಡ್ಸಣಿಯ ಒಳ ರಸ್ತೆಯಲ್ಲಿ ಸುಮಾರು 3.5 ಕಿ.ಮೀ ದೂರ ಹೋದಾಗ 1ಕಿಮೀ ದೂರ ಕಚ್ಚಾ ರಸ್ತೆ ಸಿಗುತ್ತದೆ. ಅಲ್ಲಿ ಈ ಜಲಪಾತ ಸಿಗುತ್ತದೆ. ಜಲಪಾತದ ಹತ್ತಿರದವರೆಗೂ ಸಣ್ಣಪುಟ್ಟ ವಾಹನಗಳು ಹೋಗುತ್ತವೆ.
ಮೂರ್ನಾಲ್ಕು ಹಂತದಲ್ಲಿ ಜಲಪಾತ ಧುಮುಕುತ್ತಿದ್ದು, ಬಂಡೆಕಲ್ಲುಗಳು ಜಾರುವ ಅಪಾಯ ಇರುವ ಕಾರಣ ಹತ್ತಿರ ಹೋಗದೇ ಇರುವುದೇ ಒಳಿತು.
ಜಲಪಾತ ಧುಮ್ಮಿಕ್ಕುವ ಸ್ಥಳದಲ್ಲಿ ಹೊಸದೇವತೆ ದೇವಸ್ಥಾನವಿದೆ. ಹೀಗಾಗಿ ಇಲ್ಲಿ ಆಹಾರ ಸೇವನೆ ನಿಷಿದ್ಧ. ಅನತಿ ದೂರದಲ್ಲಿರುವ ಇನ್ನೊಂದು ಹಳ್ಳದ ಸಮೀಪ ಆಹಾರ ಸೇವಿಸಬಹುದು.
ಹೊಸದೇವತಾ ಜಲಪಾತದ ವಿಡಿಯೋ ಇಲ್ಲಿ ನೋಡಿ…




Discussion about this post