ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪ ಪರಿಸ್ಥಿತಿ ಅವಲೋಕನಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪಕ್ಷದ ಮುಖಂಡರು, ಜನಪ್ರತಿನಿಧಿ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದ್ದು `ಸಂತ್ರಸ್ತರ ನೋವಿಗೆ ಸ್ಪಂದಿಸಿ’ ಎಂದು ಕರೆ ನೀಡಿದ್ದಾರೆ.
ಭಾನುವಾರ ನೇರವಾಗಿ ಶಿರೂರು ಗುಡ್ಡ ಪ್ರದೇಶಕ್ಕೆ ತೆರಳಿ ಅಲ್ಲಿನ ಆಗು-ಹೋಗುಗಳನ್ನು ಕಣ್ಣಾರೆ ಕಂಡರು. ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು. ಅಲ್ಲಿಯೇ ಇದ್ದ ದಿನಕರ ಶೆಟ್ಟಿ ಹಾಗೂ ರೂಪಾಲಿ ನಾಯ್ಕ ಅವರಿಗೂ `ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ. ತಮ್ಮ ಕೈಯಾದ ಮಟ್ಟಿಗೆ ಅವರಿಗೆ ನೆರವು ನೀಡಿ’ ಎಂದು ಸೂಚಿಸಿದರು.
ಇದಾದ ನಂತರ ಯಲ್ಲಾಪುರಕ್ಕೆ ಆಗಮಿಸಿ ಅಲ್ಲಿಯೂ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. `ಕಷ್ಟದಲ್ಲಿದ್ದವರು ಯಾರೇ ಕಂಡರೂ ಅವರಿಗೆ ನೆರವು ನೀಡಲು ಬಿಜೆಪಿಗರು ಬದ್ಧವಾಗಿರಬೇಕು’ ಎಂದು ಕರೆ ನೀಡಿದರು. ಸ್ಥಳೀಯ ಸಮಸ್ಯೆಗಳ ಬಗ್ಗೆ ಮುಂಡಗೋಡದ ಮಂಜುನಾಥ ಪಾಟೀಲ, ಎಲ್ ಟಿ ಪಾಟೀಲ, ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಮಂಗೇಶ ದೇಶಪಾಂಡೆ, ಉಮೇಶ ಭಾಗ್ವತ ಇತರರು ಮಾಹಿತಿ ನೀಡಿದರು. `ಇಲ್ಲಿನ ಕಾರ್ಯಕರ್ತರು ಅನುಭವಿಸುತ್ತಿರುವ ನೋವಿಗೆ ಕಾಲವೇ ಉತ್ತರ ಕೊಡುತ್ತದೆ’ ಎಂದು ವಿಜಯೇಂದ್ರ ಹೇಳಿದರು.
ಪ್ರಮುಖರಾದ ಪ್ರಸಾದ ಹೆಗಡೆ, ರವಿ ದೇವಾಡಿಗ, ಗಣಪತಿ ಬೋಳಗುಡ್ಡೆ, ಶ್ಯಾಮಲಿ ಪಾಠಣಕರ್, ಸೋಮು ನಾಯಕ, ಪ್ರದೀಪ ಯಲ್ಲಾಪುರ ಇತರರು ಪಕ್ಷ ಸಂಘಟನೆಯಲ್ಲಿ ತೊಡಗಿರುವುದನ್ನು ಗಮನಿಸಿ ಮೆಚ್ಚುಗೆವ್ಯಕ್ತಪಡಿಸಿದರು.

Leave a comment