ಜೊಯಿಡಾ: ಕೊಂದರ ಶಾಲೆಯ ಮುಖ್ಯ ಶಿಕ್ಷಕ ಈರಣ್ಣ ಪಗಡಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಪ್ರಶಸ್ತಿ ನೀಡಿದೆ. ಹಳಿಯಾಳ ತಾಲೂಕಿನ ಮದನಳ್ಳಿ ಗ್ರಾಮದ ಈರಣ್ಣ ಅವರು 1999ರಲ್ಲಿ ಶಿಕ್ಷಕ ವೃತ್ತಿಗೆ ಬಂದವರು. ಜೊಯಿಡಾದಂಥಹ ಕುಗ್ರಾಮದಲ್ಲಿ ಸಹ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ತಮ್ಮದೇ ಆದ ಕಲಿಕೆಯ ಶೈಲಿಯಿಂದ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮಲ್ಲಿ ಕಲಿತ ಮಕ್ಕಳು ಯೋಗ, ಪರಿಸರ, ಜನ ಜಾಗೃತಿ ಹಾಗೂ ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು ಪೂರೈಸುವ ಕೆಲಸದಲ್ಲಿಯೂ ಸಕ್ರೀಯವಾಗಿ ತೊಡಗುವಂತೆ ಅವರು ಮಾಡಿದ್ದಾರೆ.
Discussion about this post