ಐನೂರಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ, 12ಕ್ಕೂ ಅಧಿಕ ಹಿಟಾಚಿ-ಜೆಸಿಬಿಗಳು, 10ಕ್ಕೂ ಅಧಿಕ ಟಿಪ್ಪರ್, ಹಲವು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಸಾಕ್ಷಿಯಾಗಿ ಶಿರೂರಿನ ಗುಡ್ಡ ಕುಸಿತ ತೆರವು ಕಾರ್ಯ ನಡೆಯುತ್ತಿದೆ.
ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯುವ ಕೆಲಸ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕಾಣೆಯಾದವರ ಹುಡುಕಾಟ ಮುಂದುವರೆದಿದೆ. ಪದೇ ಪದೇ ಮಣ್ಣು ಕುಸಿಯುತ್ತಿರುವುದು ಹಾಗೂ ಆಗಾಗ ಸುರಿಯುವ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಥಳದಲ್ಲಿ ಬೀಡು ಬಿಟ್ಟಿರುವ ಪೊಲೀಸರು ಮುನ್ನಚ್ಚರಿಕಾ ಕ್ರಮವಹಿಸಿದ್ದು, ಅನಗತ್ಯವಾಗಿ ಯಾರೂ ಅಲ್ಲಿ ಬರದಂತೆ ತಡೆಯುತ್ತಿದ್ದಾರೆ.
ಸೋಮವಾರ ಮುಂದುವರೆದ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ




Discussion about this post