ಅoಕೋಲಾ: ಗುಡ್ಡ ಕುಸಿತದ ಕಾರಣ ಹೆದ್ದಾರಿ ಸಂಚಾರ ಬಂದ್ ಆಗಿದ್ದು, ತೊಂದರೆ ಅನುಭವಿಸುತ್ತಿರುವ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಚಾಲಕರ ಪರವಾಗಿ ಮಂಗಳೂರಿನ ದಿನೇಶ ಭಟ್ಟ ಧ್ವನಿ ಎತ್ತಿದ್ದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಅವರು ಟ್ವೀಟ್ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿರುವ ಚಾಲಕ ಹಾಗೂ ನಿರ್ವಾಹಕರಿಗೆ ಕನಿಷ್ಟ ಸೌಕರ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. `ಕಾಣೆಯಾದವರನ್ನು ಪತ್ತೆ ಮಾಡಬೇಕು. ಹೆದ್ದಾರಿ ಬದಿಯಲ್ಲಿ ನಿಂತಿರುವ ಸರಕು ಸಾಗಣೆ ಲಾರಿಗಳ ಚಾಲಕ-ನಿರ್ವಾಹಕರಿಗೆ ಊಟ ತಿಂಡಿ ನೀಡಬೇಕು. ಸ್ನಾನ, ಶೌಚಕ್ಕೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಚಾಲಕರ ಆರೋಗ್ಯ ಹಾಳಾಗುತ್ತಿದೆ’ ಎಂದು ಸಹ ಕೆಲವರು ವಿವರಿಸಿದ್ದಾರೆ.

Leave a comment