6 Skip to content

ಲೋಹಗಳ ಹುಡುಕಾಟ: ನದಿ ಆಳದಲ್ಲಿ ಬಗೆದಷ್ಟು ಬರೀ ಮಣ್ಣು!

ಗಂಗಾವಳಿ ನದಿ ಆಳದ 4 ಕಡೆ ಲೋಹ ಪತ್ತೆಯಾಗಿರುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದು, ಶನಿವಾರ ಅಲ್ಲಿ ಹುಡುಕಾಟ ನಡೆಸಿದವರಿಗೆ ಸಿಕ್ಕಿದ್ದು ಬರೀ ಮಣ್ಣು!
ಗುರುವಾರ ಡ್ರೋಣ್ ಹಾಗೂ ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆ ನಡೆಸಿದಾಗ ನೀರಿನ ಆಳದಲ್ಲಿ ನಾಲ್ಕು ಕಡೆ ನಾಲ್ಕು ಬಗೆಯ ಲೋಹದ ಕುರುಹುಗಳಿರುವುದು ಗಮನಕ್ಕೆ ಬಂದಿತ್ತು. ಭೂಮಿ ಹಾಗೂ ನದಿ ಆಳದಲ್ಲಿ ಹುಡುಕಾಟ ನಡೆಸಿದ್ದು, ಆಗ ರಸ್ತೆಯಿಂದ 60ಮೀ ದೂರದ ನದಿ ಆಳದಲ್ಲಿ ಅರ್ಜುನ ಓಡಿಸುತ್ತಿದ್ದ ಲಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಅನತಿ ದೂರದಲ್ಲಿ ಒಂದು ಕ್ಯಾಬಿನ್, ಟವರ್ ಸಹ ಕಾಣಿಸಿತ್ತು.
ನದಿಯಲ್ಲಿ ಕಾಣಿಸಿದ ಕ್ಯಾಬಿನ್ ಗ್ಯಾಸ್ ಟ್ಯಾಂಕರ್’ಗೆ ಸೇರಿದ್ದು ಎಂದು ಅಂದಾಜಿಸಲಾಗಿತ್ತು. ಇನ್ನೊಂದು ಉದ್ದವಾದ ರಿಲಿಂಗ್ ನೀರಿನಾಳದಲ್ಲಿ ಕಾಣಿಸಿದ್ದು, ಅದು ಯಾವುದರ ಲೋಹ ಎಂದು ಗೊತ್ತಾಗಿರಲಿಲ್ಲ. ಇನ್ನೊಂದು ಥರ್ಮರ್ ಸ್ಕಾನರ್ ನೀರಿನ ಆಳದಲ್ಲಿರುವ ಬಗ್ಗೆ ಶಂಕೆಯಿದ್ದು, ಅದು ಖಚಿತವಾಗಿರಲಿಲ್ಲ.
ಈ ಹಿನ್ನಲೆ ಲೋಹದ ಕುರುಹುಗಳು ಕಂಡುಬoದ ಪ್ರದೇಶವನ್ನು ಗುರುತಿಸಿ ಅಲ್ಲಿ ಮುಳುಗು ತಜ್ಞರು ಶನಿವಾರ ಶೋಧ ನಡೆಸಿದರು. ನೀರನ ಆಳದಲ್ಲಿ ಕಲ್ಲು ಹಾಗೂ ಮಣ್ಣು ಹೊರತುಪಡಿಸಿ ಉಳಿದವೂ ಏನೂ ಸಿಕ್ಕಿಲ್ಲ. ನಾಳೆ ಸಹ ಹುಡುಕಾಟ ಮುಂದುವರೆಯಲಿದೆ.

ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..

 

 

Leave a comment

Leave a Reply

You cannot copy content of this page