ಶಿರಸಿ: ವ್ಯಾಪಕ ಮಳೆಯಿಂದ ಬಿಸ್ಲಕೊಪ್ಪದ ಮಾಹದೇವ ಹಸ್ಲರ್ ಎಂಬಾತ ಕಾಲುವೆಗೆ ಬಿದ್ದು ಸಾವನಪ್ಪಿದ್ದು, ಆತನ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಅನಗತ್ಯ ವಿಳಂಬ ಮಾಡಿದರು.
3 ತಾಸು ಕಳೆದರೂ ಮರಣೋತ್ತರ ಪರೀಕ್ಷೆ ನಡೆಯದಿರುವುದನ್ನು ಅರಿತ ಶಾಸಕ ಶಿವರಾಮ ಹೆಬ್ಬಾರ್ ದಿಢೀರ್ ಆಗಿ ಆಸ್ಪತ್ರೆಗೆ ತೆರಳಿ ವೈದ್ಯಾಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು. `ಸಾವಿನ ನೋವಿನಲ್ಲಿದ್ದವರಿಗೆ ತೊಂದರೆ ಕೊಟ್ಟರೆ ನಿಮಗೆ ಏನು ಸಿಗುತ್ತದೆ?’ ಎಂದು ಹೆಬ್ಬಾರ್ ಪ್ರಶ್ನಿಸಿದರು. ಮೇಲಧಿಕಾರಿಗಳಿಗೆ ಫೋನ್ ಮಾಡಿ ತರಾಠೆಗೆ ತೆಗೆದುಕೊಂಡರು. ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದರು.
ಆಸ್ಪತ್ರೆ ಆವರಣದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಇಲ್ಲಿ ನೋಡಿ..
ಮರಣೋತ್ತರ ಪರೀಕ್ಷೆಗೆ ಅನಗತ್ಯ ನೆಪ: ಆಸ್ಪತ್ರೆ ಆವರಣದಲ್ಲಿ ಶಿವರಾಮ ಹೆಬ್ಬಾರ್ ರೋಷಾವೇಷ!

Leave a comment