6 Skip to content

ಶಿರೂರು: 13ನೇ ದಿನ 4ನೇ ಸ್ಥಳದಲ್ಲಿ ಸಿಕ್ಕಿದ್ದು ಶೂನ್ಯ!

ಡ್ರೋಣ್ ಹಾಗೂ ಹೆಲಿಕಾಪ್ಟರ್ ಮೂಲಕ ಶಿರೂರು ಗುಡ್ಡ ಹಾಗೂ ಗಂಗಾವಳಿ ನದಿ ಆಳದಲ್ಲಿ ಹುಡುಕಾಟ ನಡೆಸಿದಾಗ ನಾಲ್ಕು ಕಡೆ ಲೋಹದ ಅಂಶ ಪತ್ತೆಯಾಗಿದ್ದು, ಭಾನುವಾರ 4ನೇ ಪ್ರದೇಶದಲ್ಲಿ ಹುಡುಕಾಟ ನಡೆಯಿತು. ಆದರೆ, ಅಲ್ಲಿ ಸಹ ಕಲ್ಲು, ಮರ ಹಾಗೂ ಮಣ್ಣಿನ ರಾಡಿ ಬಿಟ್ಟು ಬೇರೆ ಏನೂ ಸಿಕ್ಕಿಲ್ಲ.
ಗಂಗಾವಳಿ ನದಿ ನೀರಿನ ಹರಿವು ಸಹ ಅತ್ಯಂತ ವೇಗದಲ್ಲಿದ್ದು, ಮುಳುಗು ತಜ್ಞರು ಸಾಕಷ್ಟು ಶ್ರಮವಹಿಸಿ ನೀರಿಗೆ ಇಳಿದರು. ಆದರೆ, ಹೆಚ್ಚು ಕಾಲ ನೀರಿನ ಆಳದಲ್ಲಿ ಇರಲು ಅವರಿಗೆ ಸಾಧ್ಯವಾಗಿಲ್ಲ. ಶನಿವಾರ ಈಶ್ವರ ಮಲ್ಪೆ ತಂಡದ ಸದಸ್ಯರೊಬ್ಬರು ನೀರಿನ ಆಳಕ್ಕೆ ಇಳಿದು ಗಾಯ ಮಾಡಿಕೊಂಡಿದ್ದು, ಅಗತ್ಯ ಮುನ್ನೆಚ್ಚರಿಕೆವಹಿಸುವಂತೆ ಜಿಲ್ಲಾಡಳಿತ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಿತ್ತು. ಅದಾಗಿಯೂ ತಮ್ಮ ತಂಡದೊAದಿಗೆ ಮುನ್ನುಗ್ಗಿದ ಈಶ್ವರ ಮಲ್ಪೆ ಭಾನುವಾರ ನಾನಾ ರೀತಿಯ ಕಸರತ್ತು ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.

ಕಾರ್ಯಾಚರಣೆ ಬಹುತೇಕ ಸ್ಥಗಿತ:
13 ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದರೂ 8 ಶವಗಳ ಹೊರತು ಉಳಿದದ್ದು ಏನೂ ಸಿಗಲಿಲ್ಲ. ಹೀಗಾಗಿ ಬಹುತೇಕ ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸ್ಥಳಕ್ಕೆ ಆಗಮಿಸಿದ ನಂತರ ಈ ಬಗ್ಗೆ ಅವರು ಖಚಿತಪಡಿಸಲಿದ್ದಾರೆ.
ಭಾನುವಾರ ನಡೆದ ಕಾರ್ಯಾಚರಣೆಯ ಬಗ್ಗೆ ಜಿಲ್ಲಾಧಿಕಾರಿ ಲಕ್ಷಿö್ಮÃಪ್ರಿಯಾ ಮಾತನಾಡಿದ ವಿಡಿಯೋ ಇಲ್ಲಿ ನೋಡಿ…

Leave a comment

Leave a Reply

You cannot copy content of this page