ಶಿರೂರು ಗುಡ್ಡ ಕುಸಿತದ ಪರಿಣಾಮ ಕಣ್ಮರೆಯಾಗಿರುವ ಲಾರಿ ಹಾಗೂ ಚಾಲಕ ಅರ್ಜುನನ ಶೋಧ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಕೇರಳ ಸರ್ಕಾರ ವಿರೋಧಿಸಿದೆ. ಕೇರಳದ ಜನಪ್ರತಿನಿಧಿಗಳು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಕ್ಕೆ ಕೇರಳ ತ್ರಿಶೂರ್‌ನಿಂದ ಹೂಳೆತ್ತುವ ಯಂತ್ರವನ್ನು ಕಳಿಸಿಕೊಡುವುದಾಗಿ ಹೇಳಿದ್ದಾರೆ.
ಆ ಯಂತ್ರ ಬಂದರೂ ಕಾರ್ಯಾಚರಣೆ ವೇಗ ಪಡೆಯಲು ಸಾಧ್ಯವಿಲ್ಲ. ಕಾರಣ ಪ್ರಸ್ತುತ ಗಂಗಾವಳಿ ನದಿಯಲ್ಲಿ ನೀರು ಸದ್ಯ ಪ್ರತಿ ಗಂಟೆಗೆ 6 ನಾಟಿಕಲ್ ಮೈಲ್ ವೇಗದಲ್ಲಿ ಹರಿಯುತ್ತಿದೆ. ಗರಿಷ್ಠ 2 ನಾಟಿಕಲ್ ಮೈಲ್ ವೇಗದಲ್ಲಿ ನೀರು ಹರಿದರೆ ಯಾವುದೇ ಯಂತ್ರ ಕಾರ್ಯಾಚರಣೆ ಸಾಧ್ಯ ಎಂಬುದು ತಜ್ಞರ ಅಭಿಮತ. ಹೀಗಾಗಿ ರಕ್ಷಣಾ ಸಿಬ್ಬಂದಿ ಸೋಮವಾರ ಕಾರ್ಯಾಚರಣೆಗೆ ಇಳಿದಿಲ್ಲ.
Discussion about this post