6 Skip to content

ಗಾಳಿ-ಮಳೆ ನಡುವೆ ಅಗ್ನಿಯ ಚೆಲ್ಲಾಟ: ಮನೆ ಭಸ್ಮ

ಕಾರವಾರ: ಧಾರಾಕಾರವಾಗಿ ಸುರಿಯುವ ಮಳೆ ನಡುವೆಯೂ ಸುಂಕೇರಿಯ ಸುರೇಶ ನಾಯ್ಕ ಅವರ ಮನೆ ಹೊತ್ತಿ ಉರಿದಿದೆ.
ಬರಗೆಶ್ವರ್ ದೇವಸ್ಥಾನದ ಬಳಿಯ ಸುರೇಶ ನಾಯ್ಕ ಕೂಲಿ ಮಾಡಿ ವಾಸಿಸುತ್ತಿದ್ದರು. ವಿದ್ಯುತ್ ಶಾರ್ಟ ಸರ್ಕಿಟ್’ನಿಂದ ಅವರ ಮನೆಗೆ ಬೆಂಕಿ ತಗುಲಿದ್ದು, ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿದರು.
ಅದಾಗಿಯೂ ಮನೆಯೊಳಗಿನ ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಮನೆಯೊಳಗಿದ್ದ ಕಪಾಟು, ಪಾತ್ರೆ, ಪ್ರಿಡ್ಜ್ ಹಾಗೂ ಆಭರಣಗಳು ಸಹ ಅಗ್ನಿಗೆ ಆಹುತಿಯಾಗಿದೆ. ಮಗಳ ವಿದ್ಯಾಬ್ಯಾಸಕ್ಕಾಗಿ ಇರಿಸಿದ್ದ ಹಣವೂ ಬೂದಿಯಾಗಿದೆ. ಅಂದಾಜು 10 ಲಕ್ಷ ರೂ ಹಾನಿಯಾಗಿದೆ.

ಅಗ್ನಿ ಅವಘಡ ಹಾಗೂ ಬೆಂಕಿ ಆರಿಸುವ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..

Leave a comment

Leave a Reply

You cannot copy content of this page