6 Skip to content

ರೋಟರಿಯಿಂದ ಉಚಿತ ನೇತ್ರ ತಪಾಸಣೆ

ಶಿರಸಿ: ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನೇತ್ರ ತಪಾಸಣೆ ನಡೆದಿದ್ದು, ರೋಟರಿ ಆಸ್ಪತ್ರೆಯ ನೇತ್ರತಜ್ಞ ಡಾ.ಎ.ಜಿ.ವಸ್ತ್ರದ ನೇತ್ರದಾನದ ಮಹತ್ವ ಸಾರಿದರು.
ಈ ಶಿಬಿರದಲ್ಲಿ 128 ಜನ ತಪಾಸಣೆಗೆ ಒಳಗಾದರು. 67 ಜನರನ್ನು ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಶಿರಸಿಯ ರೋಟರಿ ಆಸ್ಪತ್ರೆಯಲ್ಲಿ ನೇತ್ರ ತಜ್ಞ ಡಾ.ಆದಿತ್ಯ ಫಡ್ನಿಸ್ ಕಣ್ಣಿನ ಪೊರೆ ಚಿಕಿತ್ಸೆ ಮಾಡುವುದಾಗಿ ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಆರ್.ಎಂ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಜಯಶ್ರೀ ಹೆಗಡೆ ಇತರರು ಇದ್ದರು.

Leave a comment

Leave a Reply

You cannot copy content of this page