ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಕಾರವಾರದ ಲಂಡನ್ ಸೇತುವೆ ಬಳಿ ನಿರ್ಮಿಸಲಾಗಿದ್ದ ಸುರಂಗ ಮಾರ್ಗದಲ್ಲಿ ಶನಿವಾರ ಕಲ್ಬಂಡೆ ಕುಸಿದಿದೆ. ಈ ಹಿನ್ನಲೆ ಒಂದು ಮಾರ್ಗವನ್ನು ಬಂದ್ ಮಾಡಲಾಗಿದ್ದು, ಇನ್ನೊಂದು ಮಾರ್ಗದ ಮೂಲಕ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಲ್ಪಂಡೆ ಜೊತೆ ಅಲ್ಪ ಪ್ರಮಾಣದ ಮಣ್ಣು ಸಹ ಕುಸಿದಿದೆ. ಸ್ಥಳದಲ್ಲಿ ವಿವಿಧ ಯಂತ್ರಗಳು ಆಗಮಿಸಿದ್ದು, ಕಲ್ಪಂಡೆ ಸ್ಥಳಾಂತರಿಸುವ ಕೆಲಸ ನಡೆದಿದೆ. ಪೊಲೀಸರು ಅಲ್ಲಿದ್ದು ವಾಹನ ಸವಾರರಿಗೆ ಸೂಚನೆ ನೀಡುತ್ತಿದ್ದಾರೆ.
ಹೆದ್ದಾರಿ ಪ್ರಯಾಣಿಕರೇ ಇಲ್ಲಿ ಗಮನಿಸಿ: ಕಾರವಾರ ಸುರಂಗ ಮಾರ್ಗ ಬಂದ್!

Leave a comment