6 Skip to content

ಮೊದಲು ಹೊಟ್ಟೆನೋವು.. ನಂತರ ಎದೆನೋವು: ಉಸಿರಾಟ ಸಮಸ್ಯೆಯಿಂದ ಸಾವನಪ್ಪಿದ ಕಾರ್ಮಿಕ

ಕಾರವಾರ: ಮುದುಗಾದ ಎಲ್ ಆಂಡ್ ಟಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದ ಉತ್ತರ ಪ್ರದೇಶದ ಉಮೇಶ ಕುಶವಾಲಾ (43) ಎಂಬಾತರು ಅತಿಯಾದ ಹೊಟ್ಟೆನೋವು ಹಾಗೂ ಎದೆನೋವಿನಿಂದ ಸಾವನಪ್ಪಿದ್ದಾರೆ.
ಅಮದಳ್ಳಿಯ ಕಾರ್ಮಿಕ ಕಾಲೋನಿಯಲ್ಲಿ ವಾಸವಾಗಿದ್ದ ಉಮೇಶ್ ಕಳೆದ ಒಂದು ವಾರದಿಂದ ಹೊಟ್ಟೆನೋವು ಎನ್ನುತ್ತಿದ್ದರು. ನಂತರ ಎದೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದರು. ಅಗಸ್ಟ್ 2ರಂದು ರಾತ್ರಿ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ಅಲ್ಲಿನವರು ಉಪಚರಿಸಿ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಇದರಿಂದ ಪ್ರಯೋಜನವಾಗಲಿಲ್ಲ. ಉಮೇಶ್ ಸಾವನಪ್ಪಿದ ಬಗ್ಗೆ ವೈದ್ಯರು ಘೋಷಿಸಿದ್ದಾರೆ.

Leave a comment

Leave a Reply

You cannot copy content of this page