6 Skip to content

ಕಳಚುತ್ತಿರುವ ಕಳಚೆಯ ಕೊಂಡಿ: ಮುಂದುವರೆದ ಭೂ ಕುಸಿತ

ಯಲ್ಲಾಪುರ: 2021ರಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಕಂಡಿದ್ದ ಕಳಚೆಯಲ್ಲಿ ಶನಿವಾರ ರಾತ್ರಿ ಮತ್ತೆ ಕುಸಿತವಾಗಿದೆ.
ಕಳಚೆಯ ಮಾನಿಗದ್ದೆ ಕುಂಬ್ರಿಯ ಕಮಲಾಕರ್ ಭಾಗ್ವತ್ ಅವರ ಮನೆ ಮುಂದೆ ದೊಡ್ಡ ಪ್ರಮಾಣದಲ್ಲಿ ಭೂಮಿ ಕುಸಿದಿದೆ. ಜನಾರ್ದನ ಹೆಬ್ಬಾರ್ ಅವರ 1 ಎಕರೆ ತೋಟ ಮಣ್ಣು ಪಾಲಾಗಿದೆ. ಉದಯ್ ಐತಾಳ್ ಅವರ ಮನೆ ಪಕ್ಕದಲ್ಲಿ ಸಹ ಭೂಮಿ ಸಡಿಲಗೊಂಡಿದ್ದು, ಹಂತ ಹಂತವಾಗಿ ಮಣ್ಣು ಕುಸಿಯುತ್ತಿದೆ.
ಕಳೆದ ಒಂದು ವಾರದ ಹಿಂದೆ ಸಹ ಅಲ್ಪ ಪ್ರಮಾಣದ ಭೂ ಕುಸಿತ ಉಂಟಾಗಿತ್ತು. ಶನಿವಾರ ರಾತ್ರಿ ಮತ್ತೆ ಭೂಮಿ ಸಡಿಲಗೊಂಡಿದ್ದು, ಭಾನುವಾರ ಬೆಳಗ್ಗೆ ಕುಸಿತದ ಪ್ರಮಾಣ ನೋಡಿ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಭೂ ಕುಸಿತ ಹೀಗೆ ಮುಂದುವರೆದಲ್ಲಿ ಆ ಭಾಗದಲ್ಲಿ ವಾಸಿಸುವುದು ಕಷ್ಟ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕೂಡಲೇ ಸ್ಥಳಾಂತರವಾಗುವoತೆ ಸೂಚಿಸಿದ್ದಾರೆ. ಆದರೆ, ಪುನರ್ವಸತಿ ಕಲ್ಪಿಸಿಲ್ಲ ಎಂಬುದು ಜನರ ದೂರು.

ಶನಿವಾರ ರಾತ್ರಿ ಭೂ ಕುಸಿತದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..

Leave a comment

Leave a Reply

You cannot copy content of this page