ಯಲ್ಲಾಪುರ: ಕಾಳಮ್ಮನಗರದಲ್ಲಿ ನಿಲ್ಲಿಸಿಟ್ಟಿದ್ದ ಟಿಪ್ಪರ್’ಗಳ ಬ್ಯಾಟರಿ ಕದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
40 ಸಾವಿರ ರೂ ಮೌಲ್ಯದ ಬ್ಯಾಟರಿ ಕದಿಯಲು ಬಳಸಿದ್ದ 5 ಲಕ್ಷ ರೂ ಮೌಲ್ಯದ ಪಿಕ್‌ಅಪ್ ವಾಹನ ಸಹ ಸರ್ಕಾರದ ಪಾಲಾಗಿದೆ. ಜುಲೈ 14ರಂದು ಸಂಕೇತ ರಾಜೀವ ನಾಯಕ ಹಾಗೂ ಚೇತನ ಭಟ್ಟ ಎಂಬಾತರಿಗೆ ಸೇರಿದ ಟಿಪ್ಪರಿನ ಬ್ಯಾಟರಿಗಳನ್ನು ಮಂಚಿಕೇರಿ ಹಳ್ಳಿಗದ್ದೆಯ ಅಬ್ದುಲಹಮೀದ್ ಮುಜಾವರ ಹಾಗೂ ಭಗವತಿ ಮಸೀದಿಗಲ್ಲಿಯ ಸುಭಾನಿ ಹಸನಸಾಬ ಎಂಬಾತರು ಕದ್ದಿದ್ದರು.
ಬ್ಯಾಟರಿ ಕಾಣೆಯಾದ ಬಗ್ಗೆ ಜುಲೈ 21ರಂದು ಅರಿತ ಸಂಕೇತ ನಾಯ್ಕ ಪೊಲೀಸ್ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಾಲ್ಕು ಬ್ಯಾಟರಿಗಳನ್ನು ಪತ್ತೆ ಮಾಡಿದ್ದಾರೆ. ವಿಚಾರಣೆ ವೇಳೆ ಈ ಇಬ್ಬರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಜೈಲು ಸೇರಿದ್ದಾರೆ.




Discussion about this post