6 Skip to content

ಕರಡಿ ಬಾಯಿಗೆ ಸಿಲುಕಿದ್ದ ಬಾಳು ಬದುಕಿದ್ದೇ ಪವಾಡ!

ದಾಂಡೇಲಿ: `ಎಂದಿನoತೆ ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದೆ. ಏಕಾಏಕಿ ಅಲ್ಲಿಗೆ ಕರಡಿ ಮೈ-ಕೈ ಎಲ್ಲಾ ಪರಚಿತು. ಅಂತೂ ಊರ ಕಡೆ ಓಡಿ ಬಂದು ಬದುಕಿದೆ’ ಎಂದು ವನ್ಯಜೀವಿ ದಾಳಿಗೆ ಒಳಗಾದ ಬಾಳು ಕಾನು ಶೆಳಕೆ ಅನುಭವ ಹಂಚಿಕೊoಡರು.

`ಎಮ್ಮೆಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ಅವರ ಮೇಲೆ ಭಾನುವಾರ ಕರಡಿ ದಾಳಿ ನಡೆಸಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತನಾಡಲು ಕಷ್ಟವಾದರೂ ಅವರ ಆರೋಗ್ಯ ವಿಚಾರಿಸಲು ಬಂದವರಿಗೆ ಕರಡಿಯ ಭಯಾನಕ ಕಥೆ ಹೇಳಿದ್ದಾರೆ.

`ಮನೆ ಪಕ್ಕದ ಕಾಡಿನಲ್ಲಿ ವನ್ಯಜೀವಿಗಳು ಇರುವುದು ಗೊತ್ತಿತ್ತು. ಆದರೆ, ಈ ಬಗೆ ಆಕ್ರಮಣಕಾರಿ ಕರಡಿ ಇದೆ ಎಂದು ಅಂದುಕೊoಡಿರಲಿಲ್ಲ. ಕೈ ಮುಖ ಬೆನ್ನು ಎಲ್ಲಾ ಕಡೆ ಪರಚಿತ್ತು. ಎಮ್ಮೆ ಮೇಯಿಸಲು ಹೋಗುವಾಗಲೂ ಎಚ್ಚರಿಕೆ ಅಗತ್ಯ’ ಎಂದು ಅವರು ತನ್ನ ಸಂಬoಧಿಕರಿಗೆಲ್ಲ ಕಿವಿಮಾತು ಹೇಳಿದರು.

ಗಂಭೀರ ಗಾಯಗೊಂಡ ಕಾರಣ ಅವರಿಗೆ ಧಾರವಾಡದಲ್ಲಿ ಚಿಕಿತ್ಸೆ ಮುಂದುವರೆದಿದೆ.

 

Leave a comment

Leave a Reply

You cannot copy content of this page