ಶಿರಸಿ: ಕೇರಳದ ಸಚಿನ್ ಗಾಯಕವಾಡ ಹಾಗೂ ವಿಷ್ಣು ಎಂಬಾತರಿಗೆ ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತ್ವರಿತ ಕಾರ್ಯಾಚರಣೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಿದ ಶಿರಸಿ ಪೊಲೀಸರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಪೊಲೀಸ್ ವರಿಷ್ಠ ಎಂ ನಾರಾಯಣ ಸಹ ಅಧೀನ ಅಧಿಕಾರಿಗಳನ್ನು ಶ್ಲಾಘಿಸಿದರು.
ಅಗಸ್ಟ್ 4ರಂದು ಶಿವಾಜಿ ಹಾಗೂ ವಿಷ್ಣುವನ್ನು ಮಳಲಗಾವ್’ಗೆ ಕರೆಯಿಸಿಕೊಂಡ ದುಷ್ಕರ್ಮಿಗಳು ಅವರ ಬಳಿಯಿದ್ದ 9.11 ಲಕ್ಷ ರೂ ಎಗರಿಸಿ ಪರಾರಿಯಾಗಿದ್ದರು. ಆರೋಪಿತರಲ್ಲಿ ಒಬ್ಬ ವಿಕಲಚೇತನ ವ್ಯಕ್ತಿಯಿದ್ದು, ಇದೇ ಸುಳಿವು ಆಧರಿಸಿ ಪೊಲೀಸರು ಎಲ್ಲರನ್ನು ಬಂಧಿಸಿದ್ದಾರೆ.
ಆತ ಬಂಗಾರ ಕೊಡುವುದಾಗಿ ಹೇಳಿ ದೂರುದಾರರಿಗೆ 800 ಮಿಲಿ ಬಂಗಾರ ತೋರಿಸಿದ್ದ. ಅಂಥಹ ಬಂಗಾರ ಅಗತ್ಯವರಿರುವ ಬಗ್ಗೆ ಸಚಿನ್ ಹೇಳಿದಾಗ ಮಳಲಗಾವಿನ ಕಾಡಿಗೆ ಕರೆದಿದ್ದ. ಅಲ್ಲಿ 7 ಜನ ಸೇರಿ ದಾಳಿ ನಡೆಸಿ, ಮೊಬೈಲ್ ಹಾಗೂ ಹಣವನ್ನು ಎಗರಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿತರನ್ನು ಬಂಧಿಸಿದ್ದಾರೆ.
ಸೊರಬದ ನಾಗಪ್ಪ ಕೋರಚರ್, ಅವಿನಾಶ ಕೊರಚರ್, ನಿಸ್ಸಾರ ಅಹಮ್ಮದ, ಸಂಜೀವ ಕೆ ಆರ್, ಶಿಖಾರಿಪುರದ ಕೃಷ್ಣಪ್ಪ ನಾಯ್ಕ ಬಂಧಿತರು. ಇವರಿಂದ ಈವರೆಗೆ 7.63 ಲಕ್ಷ ರೂ ದೊರೆತಿದೆ.
ಅಗಸ್ಟ್ 4ರಂದು ನಡೆದಿದ್ದ ದರೋಡೆ ಕುರಿತು ಪ್ರಕಟವಾದ ಸುದ್ದಿ ಇಲ್ಲಿ ಓದಿ..
ಚಿನ್ನದ ಮೇಲೆ ಆಸೆ – ಕಾಸಿನ ಮೇಲೆ ಪ್ರೀತಿ: ಚಿನ್ನದ ಜೊತೆ ಕಾಸೂ ಕಳೆದುಕೊಂಡ ಅಕ್ಕಸಾಲಿಗ!
Discussion about this post