ಹೊನ್ನಾವರ: ಹಳದಿಪುರದ ಸಾಲಕೇರಿ ಗಣಪತಿ ದೇವಸ್ಥಾನದ ಬಳಿ ಗೂಡಂಗಡಿ ನಡೆಸುವ ವಾಸು ದೇವು ಗೌಡ (58) ಎಂಬಾತ ಅಲ್ಲಿಯೇ ಸರಾಯಿ ಮಾರಾಟ ನಡೆಸುತ್ತಿದ್ದು, ಪಿಸೈ ಮಹಾಂತೇಶ ನಾಯ್ಕ ಇದಕ್ಕೆ ತಡೆ ಒಡ್ಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿಯೇ ಈತ ಸರಾಯಿ ಮಾರುತ್ತಿದ್ದು, ವಿವಿಧ ವಾಹನ ಸವಾರರು ಖಾಯಂ ಗಿರಾಕಿಯಾಗಿದ್ದರು. ಮದ್ಯ ಸೇವಿಸಿ ವಾಹನ ಓಡಿಸುವವರಿಂದ ಅಪಘಾತದ ಪ್ರಮಾಣ ಅಧಿಕವಾಗುವ ಸಾಧ್ಯತೆಗಳಿದ್ದವು. ದೇವಾಲಯಕ್ಕೆ ಆಗಮಿಸುವವರಿಗೆ ಸಹ ಅಕ್ರಮ ಸರಾಯಿ ಮಾರಾಟ ಸಮಸ್ಯೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನಲೆ ಅಗಸ್ಟ 8ರ ಸಂಜೆ 7.50ರ ಆಸುಪಾಸಿಗೆ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಹಳದಿ ಬಣ್ಣದ ಕೈ ಚೀಲದಲ್ಲಿ ಒಂದಷ್ಟು ಸರಾಯಿ ಕೊಟ್ಟೆ ಹಾಗೂ ಬಾಟಲಿಗಳು ಸಿಕ್ಕಿವೆ. ಈ ಅಕ್ರಮ ಸರಾಯಿಯನ್ನು ಮಾರಾಟ ಮಾಡುತ್ತಿದ್ದ ಹಿನ್ನಲೆ ವಾಸು ಗೌಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discussion about this post