6

30 ವರ್ಷದ ಹಿಂದೆ ರಾಷ್ಟ್ರಧ್ವಜಕ್ಕೆ ಅಪಮಾನ: ಯಾರಿಗೂ ಗೊತ್ತಾಗಲೇ ಇಲ್ಲ ಈ ಸತ್ಯ!

1995ರಲ್ಲಿ ತೆರೆಕಂಡ ಅಂಬರೀಶ್ ಅಭಿನಯದ `ಬೇಟೆಗಾರ’ ಕನ್ನಡ ಸಿನಿಮಾದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ. ಪೊಲೀಸ್ ಅಧಿಕಾರಿಯೊಬ್ಬರ ಮುಂದೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿದ ಸನ್ನಿವೇಶ ಚಿತ್ರದಲ್ಲಿದೆ. ಚಿತ್ರಿಕರಣ ನಡೆದು 30 ವರ್ಷ ಕಳೆದರೂ ಈ ವಿಷಯ ಯಾರಿಗೂ ಗೊತ್ತಾಗಿಲ್ಲ!

ಉದಯ ಟಿವಿಯಲ್ಲಿ ಪ್ರಸಾರವಾದ ಚಿತ್ರ ನೋಡುತ್ತಿದ್ದ 16 ವರ್ಷದ ಬಾಲಕಿ ಮಾನ್ಯ ಸತೀಶ್ ನಾಯ್ಕ ಇದನ್ನು ಗುರುತಿಸಿದ್ದು, ಈವರೆಗೂ ಕಾನೂನು ಕ್ರಮ ಆಗದ ಬಗ್ಗೆ ತಂದೆಗೆ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳ ಪಾತ್ರದ ಮುಂದೆಯೇ ಈ ರೀತಿ ಕಾನೂನು ಉಲ್ಲಂಘನೆ ಆಗಿರುವ ಬಗ್ಗೆ ತಂದೆಯನ್ನು ಪ್ರಶ್ನಿಸಿದ್ದು, ಪ್ರಸ್ತುತ ಕಾರವಾರದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹಾಗೂ ಮುರುಡೇಶ್ವರದ ಸತೀಶ ನಾಯ್ಕ ಸೇರಿ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. `30 ವರ್ಷದ ಹಿಂದಿನ ಪ್ರಕರಣಕ್ಕೆ ಈಗ ಕ್ರಮ ಕೈಗೊಳ್ಳಲು ಆಗದೇ ಇದ್ದರೂ ಚಿತ್ರದಲ್ಲಿ ಬರುವ ಆ ಸನ್ನಿವೇಶವನ್ನು ತೆಗೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಎಟಿ ರಾಘು ಈ ಚಿತ್ರವನ್ನು ನಿರ್ದೇಶಿಸಿದ್ದರು. ಎಚ್ ಎನ್ ನಾಗಭೂಷಣ್ ಸಹಾಯಕ ನಿರ್ದೇಶಕರಾಗಿದ್ದರು. ಎಟಿಆರ್ ಫಿಲ್ಮ ಬ್ಯಾನರ್ ಅಡಿ ನಿರ್ಮಾಣವಾದ ಚಿತ್ರ ಇದಾಗಿದ್ದು, ಸಂಗೀತಕ್ಕೆ ಸಾಧು ಕೋಕಿಲ ಧ್ವನಿಯಾಗಿದ್ದರು.
ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿದ ಚಿತ್ರದ ತುಣುಕು ಇಲ್ಲಿ ನೋಡಿ..

  • Related Posts

    ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು

    Share this… Facebook Pinterest Twitter Linkedin Whatsappಅಜ್ಜನ ಜನ್ಮದಿನದಂದೇ ಹೊಸ ಹೆಜ್ಜೆ: ಅತ್ಯಾಧುನಿಕ ಕ್ರಿಯೇಟಿವ್ ಆಫೀಸ್ ‘ಐಕಾನ್ಜಾ’ ಆರಂಭಿಸಿದ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಹೈದರಾಬಾದ್: ಭಾರತೀಯ ಚಿತ್ರರಂಗದ ಜನಪ್ರಿಯ ನಟ, ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ತಮ್ಮ ವೃತ್ತಿಜೀವನದಲ್ಲಿ…

    ‘ಆಂಟಿ’ ಎಂದ ಕಿರಣ್ ಶಾಸ್ತ್ರಿ.ಬಿಗ್ ಬಾಸ್ ನಲ್ಲಿ ಶುರುವಾಯ್ತು ಕಿರಿಕ್

    Share this… Facebook Pinterest Twitter Linkedin Whatsappಬಿಗ್ ಬಾಸ್ ಕನ್ನಡ ಸೀಸನ್ 13: ಎಂಟ್ರಿ ದಿನವೇ ದೊಡ್ಮನೆಯಲ್ಲಿ ಕಿರಿಕ್! ‘ಆಂಟಿ’ ಎಂದಿದ್ದಕ್ಕೆ ಪ್ರಥಮಾ ಪ್ರಸಾದ್ ಗರಂ ಬೆಂಗಳೂರು: ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ಮೊದಲ ದಿನವೇ…

    Leave a Reply

    Your email address will not be published. Required fields are marked *

    You cannot copy content of this page