ಕುಮಟಾ: ಗೋಕರ್ಣದ ಕೋಟಿತೀರ್ಥಕ್ಕೆ ಪಟ್ಟೆ ವಿನಾಯಕ ಗೆಳೆಯರ ಬಳಗದವರು ಲಕ್ಷ ಮೀನಿನಿ ಮರಿಗಳನ್ನು ನೀರಿಗೆ ಬಿಟ್ಟಿದ್ದಾರೆ.
ಕೋಟಿತೀರ್ಥ ಸ್ವಚ್ಚತೆ ಕಾಪಾಡುವ ಹಿನ್ನಲೆಯಲ್ಲಿ ಈ ಮೀನಿನ ಮರಿಗಳನ್ನು ಬಿಡಲಾಗಿದೆ. ಕೋಟಿತೀರ್ಥದ ಸ್ವಚ್ಛತೆಗೆ ವಿಶೇಷ ಆಸಕ್ತಿವಹಿಸಿರುವ ಗೆಳೆಯರ ಬಳಗದವರು ಈ ಹಿಂದೆ ಸಹ ಇಲ್ಲಿ ಸ್ವಚ್ಛತಾ ಆಂದೋಲನ ನಡೆಸಿದ್ದರು. ಅಲ್ಲಿ ಬೀಳುವ ಕಸ-ಕಡ್ಡಿಗಳನ್ನು ಆರಿಸುವುದು ಅವರ ಖಾಯಂ ಕೆಲಸ.
ಇದರೊಂದಿಗೆ ಕೋಟಿತೀರ್ಥದ ಸುತ್ತಲು ಕಸದ ತೊಟ್ಟಿ ನಿರ್ಮಾಣ, ಸ್ನಾನಘಟ್ಟ ಪ್ರದೇಶದಲ್ಲಿ ಕಾಲು ಜಾರದಂತೆ ಮೆಟ್ಟಿಲು ತಿಕ್ಕುವಿಕೆ ಮೊದಲಾದವುಗಳನ್ನು ಮಾಡುತ್ತಿದ್ದಾರೆ. ಇದೀಗ ಶಿವಮೊಗ್ಗದಿಂದ ರಘು, ಗೌರಿ, ಕಾಟ್ಲಾ ಮತ್ತು ಕೋಟಿತೀರ್ಥದ ಸುತ್ತ ಬೆಳೆಯುವ ಗಿಡ್ಡ ಬಳ್ಳಿಗಳನ್ನು ಭಕ್ಷಿಸುವ ವಿಶೇಷ ಮೀನುಗಳನ್ನು ನೀರಿಗೆ ಬಿಟ್ಟಿದ್ದಾರೆ.




Discussion about this post