ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣವಾದ IRB ಕಂಪನಿಗೆ ಇನ್ನೊಂದು ಮುಖ್ಯ ರಸ್ತೆಯ ಕೆಲಸ ಸಿಕ್ಕರೆ ಏನಾಗಬೇಡ? `ಗೋಕರ್ಣ-ವಡ್ಡಿ-ಶಿರಸಿ ರಸ್ತೆಯನ್ನು ಸರಿಮಾಡಿಕೊಡುವಂತೆ ಐ ಆರ್ ಬಿ ಕಂಪನಿಗೆ ಸೂಚಿಸಬೇಕು’ ಎಂದು ಅಚವೆ, ಹಿಲ್ಲೂರು, ಮೊಗಟಾ ಗ್ರಾಮ ಪಂಚಾಯತದವರು ಮನವಿ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ `ಅಸ್ತು’ ಎಂದು ಹಣ ಬಿಡುಗಡೆ ಮಾಡಿದರೆ ಇನ್ನಷ್ಟು ಜೀವ ಬಲಿಯಾಗುವುದು ಖಚಿತ!
ಶಿರೂರು ಗುಡ್ಡ ಕುಸಿತವಾದಾಗ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿದ್ದು, ಬಹುಬಾರ ಹೊತ್ತ ವಾಹನಗಳನ್ನು ಹಿಲ್ಲೂರು ಮಾರ್ಗದಲ್ಲಿ ಓಡಿಸಲಾಗಿತ್ತು. ಇದರ ಪರಿಣಾಮ ಆ ರಸ್ತೆ ಸಂಪೂರ್ಣ ಹೊಂಡಗಳಿoದ ಕೂಡಿದೆ. ದ್ವಿಚಕ್ರ ವಾಹನಗಳು ಸಹ ಈ ಮಾರ್ಗದಲ್ಲಿ ಓಡಾಡುವ ಹಾಗಿಲ್ಲ. 30ಕ್ಕೂ ಅಧಿಕ ಊರಿನವರು ಈ ರಸ್ತೆಯನ್ನು ಅವಲಂಬಿಸಿದ್ದು, ಅಂದಾಜು 30ಕಿಮೀ ದೂರದಲ್ಲಿ ಓಡಾಟ ಸಾಧ್ಯವೇ ಇಲ್ಲ. ಹೀಗಾಗಿ ಆ ಭಾಗದ 30 ಜನ ಸಹಿ ಮಾಡಿರುವ ಪತ್ರ ಜಿಲ್ಲಾಡಳಿತದ ಕಡತ ಸೇರಿದ್ದು, ಅದರಲ್ಲಿ ತುರ್ತಾಗಿ `IRB ಕಂಪನಿಯಿoದಾದರೂ ಈ ರಸ್ತೆ ಸರಿ ಮಾಡಿಸಿಕೊಡಿ’ ಎಂದು ಮನವಿ ಮಾಡಿದ್ದಾರೆ.
`ಮರುಡಾಂಬರೀಕರಣ ಕಾಮಗಾರಿ ನಡೆಸಲು ಕನಿಷ್ಟ 3-4 ತಿಂಗಳು ಅಗತ್ಯವಿರುವುದರಿಂದ ತುರ್ತು ಕಾಮಗಾರಿಯನ್ನಾದರೂ ನೆರವೇರಿಸಿ’ ಎಂದು ಆ ಭಾಗದವರು ಮನವಿ ಮಾಡಿದ್ದಾರೆ. ಈ ಮಾರ್ಗದಲ್ಲಿ ವಾಹನಗಳು ಸಿಕ್ಕಿಬಿದ್ದ ಚಿತ್ರಗಳನ್ನು ಸಹ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
Discussion about this post