ಯಲ್ಲಾಪುರ: ಕಾಳಮ್ಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವತಂತ್ರೋತ್ಸವದ ನಿಮಿತ್ತ ಹೊಸ ಧ್ವಜಸ್ಥಂಭ ನಿರ್ಮಿಸಲಾಗಿದೆ. ನೂತನವಾಗಿ ನಿರ್ಮಿಸಿದ ಧ್ವಜಸ್ಥಂಭದಲ್ಲಿಯೇ ಅಗಸ್ಟ 15ರ ಬಾವುಟ ಹಾರಲಿದೆ.
ಈ ಹಿಂದೆ ಇದ್ದ ಧ್ವಜಸ್ಥಂಭ ಮಧ್ಯಭಾಗದಲ್ಲಿದ್ದು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿತ್ತು. ಜೊತೆಗೆ ಧ್ವಜಾರೋಹಣಕ್ಕೆ ಅನುಕೂಲಕರ ವಾತಾವರಣ ಇರಲಿಲ್ಲ. ವಿಸ್ತಾರವಾದ ಪ್ರದೇಶ ಸಿಗದ ಕಾರಣ ಇದೀಗ ಧ್ವಜಸ್ಥಂಭವನ್ನು ಸ್ಥಳಾಂತರಿಸಲಾಗಿದೆ. ಕಾಲೇಜು ಆವರಣದಲ್ಲಿ ಹೊಸದಾಗಿ ಧ್ವಜಸ್ಥಂಭ ನಿರ್ಮಿಸಲಾಗಿದೆ.
`ಕಾಲೇಜಿನ ಮುಂದಿದ್ದ ಧ್ವಜಸ್ಥಂಭ ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು. ಸಾರ್ವಜನಿಕ ರಸ್ತೆಗೆ ತಾಗಿ ಧ್ವಜಸ್ಥಂಭ ಇದ್ದಿದ್ದರಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿದ್ದು, ಈ ಹಿನ್ನಲೆ ಅದನ್ನು ಸ್ಥಳಾಂತರಿಸಲಾಗಿದೆ’ ಎಂದು ಪ್ರಾಚಾರ್ಯ ಜನಾರ್ಧನ್ ತಿಳಿಸಿದರು. `ಧ್ವಜಸ್ಥಂಬ ಸ್ಥಳಾಂತರದಿoದ ಈ ಭಾಗದ ವಸತಿ ನಿಲಯ, ಪ್ರೌಢಶಾಲೆ, ಐಟಿಐ ಕಾಲೇಜು ಹಾಗೂ ಸಪ್ರದ ಕಾಲೇಜಿನ ವಿದ್ಯಾರ್ಥಿ ಸಿಬ್ಬಂದಿಗೆ ಅನುಕೂಲವಾಗಿದೆ’ ಎಂದವರು ಹೇಳಿದರು.





Discussion about this post