ಸಿದ್ದಾಪುರ: ಇಟಗಿ ಮುಸೇಗಾರಿನ ರಾಮಚಂದ್ರ ಹೆಗಡೆ ಅವರ ಸಾಕು ನಾಯಿ ಚಿರತೆಗೆ ಆಹಾರವಾಗಿದೆ. ಕಪ್ಪು ಬಣ್ಣದ ಚಿರತೆ ನಾಯಿಯನ್ನು ಹೊತ್ತೊಯ್ದಿದೆ.
ರಾಮಚಂದ್ರ ಹೆಗಡೆ ಬಗೆ ಬಗೆಯ ನಾಯಿಗಳನ್ನು ಸಾಕಿದ್ದಾರೆ. ಆ ಪೈಕಿ ಭಾರೀ ಗಾತ್ರದ ನಾಯಿ ಚಿರತೆಗೆ ಬಲಿಯಾಗಿದೆ.
ಕಳೆದ ವರ್ಷ ಸಹ ಹೆಗಡೆ ಅವರ ಬಳಿಯಿದ್ದ ನಾಯಿ ಚಿರತೆ ಪಾಲಾಗಿತ್ತು. ಮೇ 22ರ ರಾತ್ರಿ ಸಹ ಚಿರತೆ ಆಗಮಿಸಿ ಇನ್ನೊಂದು ಬಲಿ ಪಡೆದಿತ್ತು. ಇದೀಗ ಶುಕ್ರವಾರ ರಾತ್ರಿ ಮತ್ತೆ ಬಂದ ಚಿರತೆ ದೊಡ್ಡ ಜಾತಿಯ ನಾಯಿಯನ್ನು ಆಹಾರವನ್ನಾಗಿಸಿಕೊಂಡಿದೆ.







Discussion about this post