ಅನಾರೋಗ್ಯ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದಾಗ ಆಸ್ಪತ್ರೆಯ ಖರ್ಚು ವೆಚ್ಚವನ್ನು ನೀಗಿಸಲು ಇರುವಂತಹ ಒಂದು ಉಪಾಯ ಇದನ್ನು ವೈದ್ಯಕೀಯ ವಿಮೆ ಎನ್ನುತ್ತಾರೆ. ತುರ್ತು ಆರೋಗ್ಯ ಸನ್ನಿವೇಶದಲ್ಲಿ ನೆರವು ನೀಡುವ ಬಗ್ಗೆ ವ್ಯಕ್ತಿ ಹಾಗೂ ವಿಮಾ ಕಂಪನಿಯ ನಡುವೆ ಒಪ್ಪಂದ ನಡೆದಿದ್ದು, ಅದಕ್ಕೆ ಗ್ರಾಹಕ ನಿಗದಿತ ಹಣ ಸಂದಾಯ ಮಾಡಬೇಕಾಗುತ್ತದೆ.
ಇತ್ತೀಚಿಗೆ ವೈದ್ಯಕೀಯ ವಿಮೆ ಮೇಲಿನ ಜಿಎಸ್‌ಟಿ ಬಹಳ ಚರ್ಚೆಯಲ್ಲಿದೆ. ಸರ್ಕಾರದ ಹಿರಿಯ ಮಂತ್ರಿಯೊಬ್ಬರು ಈ ವಿಮೆಯ ಮೇಲಿನ ಜಿಎಸ್‌ಟಿಯನ್ನು ತೆಗೆಯುವಂತೆ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದರು. ಅಲ್ಲದೆ ಪ್ರತಿಪಕ್ಷದವರು ಈ ಬಗ್ಗೆ ವಿಶೇಷವಾದಂತಹ ಧರಣಿ ಸತ್ಯಾಗ್ರಹವನ್ನು ಸಂಸತ್ ಭವನದ ಎದುರು ಮಾಡಿದ್ದರು ಎನ್ನುವುದು ಉಲ್ಲೇಖನೀಯ.
ನಿಶ್ಚಿತವಾಗಿಯೂ ಇದು ಆಗಬೇಕು.
ಆದರೆ, ಬಡತನ ರೇಖೆಗಿಂತ ಮೇಲಿರುವ ಭಾರತದ ಪ್ರಜೆಗಳಿಗೆ ನಿಶ್ಚಿತವಾಗಿ ಏನಾಗಬೇಕು? ಎನ್ನುವುದು ವಿಚಾರ ಮಾಡೋಣ. ಬಿಪಿಎಲ್ ಕಾರ್ಡ ಹೊಂದಿರುವ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆ ಅಂದರೆ ಉಚಿತವಾದಂತಹ ವೈದ್ಯಕೀಯ ವಿಮೆಯ ಯೋಜನೆ ಇದು ಈಗಾಗಲೇ ಇದೆ. ಬಿಪಿಎಲ್ ಹೊಂದಿರುವ ಭಾರತೀಯ ಪ್ರಜೆಗಳಿಗೆ ಯಾವುದೇ ರೀತಿ ವೈದ್ಯಕೀಯ ವಿಮಾ ವಿಷಯಗಳು ಇಲ್ಲ. ಒಂದು ವೇಳೆ ಅಂಥವರು ಆಯುಷ್ಮಾನ್ ಭಾರತ್ ಕಾರ್ಡನ್ನು ಹೊಂದಿದ್ದಾನೆ ಎಂದಾದರೆ ಆಸ್ಪತ್ರೆ ಖರ್ಚು ವೆಚ್ಚದ ಶೇ 20ರಷ್ಟು ಮಾತ್ರ ಸರ್ಕಾರ ಭರಿಸುತ್ತದೆ. ಶೇ 20ರಷ್ಟು ಬರುವ ವಿಮೆಗಾಗಿ ಸರ್ಕಾರದ ಮಾರ್ಗಸೂಚಿಯ ಅನ್ವಯ ಹೋಗುವುದು ಎಷ್ಟರ ಮಟ್ಟಿಗೆ ತಾರ್ಕಿಕ ಎಂದು ಯೋಚಿಸಿ ಬಹುತೇಕರು ಅದರ ಗೋಜಿಗೆ ಹೋಗುವುದಿಲ್ಲ.
ಈ ಆರೋಗ್ಯ ವಿಮೆ ಕರೋನೋತ್ತರ ದಿನಗಳಲ್ಲಿ ಈ ವಿಮೆ ಶೇ 400ರಷ್ಟು ಪ್ರೀಮಿಯಂ ಏರಿಕೆಯಾಗಿದೆ. ಬಹಳ ಲೆಕ್ಕಚಾರವು ಹಾಕುವ ಪ್ರಜೆಗಳು ಈ ಆರೋಗ್ಯ ವಿಮೆಯ ಪ್ರೀಮಿಯಂ ಹಣವನ್ನು ತುಂಬುವ ಬದಲು ಅದನ್ನೇ ಬ್ಯಾಂಕುಗಳಲ್ಲಿ ಠೇವಣಿಯಾಗಿಟ್ಟು ಅನಾರೋಗ್ಯದ ಪರಿಸ್ಥಿತಿಯಲ್ಲಿ ಉಪಯೋಗಿಸಬಹುದು ಎಂಬ ವಿಚಾರ ಮಾಡುತ್ತಿದ್ದಾರೆ. ಇದರ ಜೊತೆಗೆ ಹಲವು ಬ್ಯಾಂಕುಗಳನ್ನು ಏಕೀಕರಣಗೊಳಿಸಿದ್ದು ಕೂಡ ಈ ಆರೋಗ್ಯ ವಿಮೆಯ ವಿಮಾಧಾರಕರಿಗೆ ದೊಡ್ಡ ಪ್ರಮಾಣದ ತೊಡಕಾಗಿದೆ. ಹಲವು ಬ್ಯಾಂಕುಗಳ ಏಕೀಕರಣದ ನಂತರ ಆಯಾ ಆಯಾ ಬ್ಯಾಂಕ್ ಗಳು ಪ್ರತ್ಯೇಕವಾಗಿ ವಿಮಾ ಕಂಪನಿಗಳ ಜೊತೆಗೆ ಮಾಡಿಕೊಂಡoತಹ ಒಪ್ಪಂದಗಳು ಕೂಡ ಮುರಿದುಬಿದ್ದವು. ಈ ವಿಮಾ ಕಂಪನಿಗಳ ಜೊತೆಗಿನ ಒಪ್ಪಂದ ಮುರಿದುದ್ದರಿಂದ ದೊಡ್ಡ ಪ್ರಮಾಣದಲ್ಲಿ ಹಾನಿಗೆ ಹಾಗೂ ಕಷ್ಟಕ್ಕೆ ಒಳಗಾದವರು ಅಲ್ಲಿಯ ವಿಮಾಧಾರಕರು ಅಂದರೆ ಬ್ಯಾಂಕಿನ ಗುಂಪು ವಿಮೆಯ ಅಡಿಯಲ್ಲಿ ವಂತಿಕೆಯನ್ನು ಇಷ್ಟು ವರ್ಷಗಳ ಕಾಲ ಕೊಟ್ಟು ಈಗ `ಇಂಗು ತಿಂದ ಮಂಗನoತೆ’ ಆದವರು.
ಒಂದು ಉದಾಹರಣೆಗೆ ಒಂದು ಕುಟುಂಬ ಅಂದರೆ ನಾಲ್ಕು ಜನ ಇರುವಂತಹ ಕುಟುಂಬಕ್ಕೆ ಬ್ಯಾಂಕುಗಳು ವಿಲೀನ ಆಗುವ ಮೊದಲು 5 ಲಕ್ಷದ ಆರೋಗ್ಯ ವಿಮೆಗೆ ವಿಮಾ ಪ್ರೀಮಿಯಂ ಕೇವಲ 7500 ರೂಪಾಯಿಯಷ್ಟಾಗಿತು. ಇಷ್ಟು ಕಡಿಮೆ ದರದ ಪ್ರೀಮಿಯಂ ಗುಂಪು ವಿಮೆಯ ಕಾರಣ ಸಾಧ್ಯವಾಗಿತ್ತು. ಬ್ಯಾಂಕುಗಳ ವಿಲೀನದ ನಂತರ ಬ್ಯಾಂಕು ಹಾಗೂ ವಿಮಾ ಕಂಪನಿಯ ಒಪ್ಪಂದ ಮುರಿದು ಬಿದ್ದದ್ದರಿಂದ ಇಷ್ಟೇ ಮೊತ್ತದ ವಿಮೆಗೆ ವಿಮಾ ಕಂಪನಿ ನೇರವಾಗಿ 31 ಸಾವಿರದಷ್ಟು ಪ್ರೀಮಿಯಂ ತುಂಬಿರಿ ಎಂಬ ಆಗ್ರಹವನ್ನು ಗ್ರಾಹಕರಿಗೆ ಮಾಡಿದ್ದು ಇಷ್ಟು ದೊಡ್ಡ ಮಟ್ಟದ ಪ್ರೀಮಿಯಂ ತುಂಬುವುದು ಬಹಳ ಕಷ್ಟ. ಈ ಕಾರಣಕ್ಕೆ ಈ ವಿಮಾಧಾರಕರು ಈ ವಿಮೆಗೆ ತುಂಬುವ ಪ್ರೀಮಿಯಂ ತುಂಬುವುದನ್ನು ನಿಲ್ಲಿಸಿ ಈ ವಿಮೆಯಿಂದ ವಂಚಿತರಾದರು. ಇನ್ನು ಕೆಲವರು ಆದಾಯ ತೆರಿಗೆ ವಿನಾಯಿತಿಯ ಆಸೆಗೆ ಈ ವಿಮೆಯ ಪ್ರೀಮಿಯಂ ತುಂಬುತ್ತಿದ್ದರು.
ಈ ನಾಲ್ಕೈದು ವರ್ಷಗಳ ಕಾಲ ಶೇ 400ರಷ್ಟು ಏರಿಕೆಯಾಗಿದ್ದು ಹೆಚ್ಚಿನ ಜನರ ಗಮನಕ್ಕೆ ಬರಲೇ ಇಲ್ಲ. ಈ ಎಲ್ಲಾ ಏರಿಕೆಯ ಕಾರಣ ಸಾಮಾನ್ಯ ಜನರು, ಬಿಡಿ ಆದಾಯ ತೆರಿಗೆ ಪಾವತಿ ದಾರರು ಕೂಡ ಈ ಪ್ರೀಮಿಯಂ ಹಣ ತುಂಬುವುದು ಕಷ್ಟ ಎನ್ನುವ ಕಾರಣಕ್ಕೆ ಈ ವಿಮೆಯಿಂದ ವಂಚಿತರಾದರು. ಅಲ್ಲದೆ ತಮ್ಮ ಆರೋಗ್ಯದ ರಕ್ಷಣೆ ಈ ವಿಮಾ ಕಂಪನಿಗಳ ಹೆಗಲಿಗೆ ಹಾಕಿ ನಿಶ್ಚಿಂತೆಯಿAದ ಇರುವಂತಹ ಹಿರಿಯ ನಾಗರಿಕರು ಕೂಡ ಈ ಮೊತ್ತದ ಪ್ರೀಮಿಯಂ ನೋಡಿ ಕಂಗಾಲಾದರು. ಅವರು ಕೂಡ ಈ ವಿಮಾ ಕಂಪನಿಗಳಿಗೆ ಹಾಗೂ ಬ್ಯಾಂಕುಗಳಿಗೆ ಹಿಡಿ ಶಾಪ ಹಾಕಿದರು. ಕೆಲವರು ಪ್ರೀಮಿಯಂ ತುಂಬಿದರು, ಇನ್ನು ಕೆಲವರು `ದೇವರೇ ಗತಿ’ ಎಂದು ಕೈಕಟ್ಟಿ ಕುಳಿತರು. ಯಾರಿಗೂ ಕೂಡ ಇಂತಹ ಒಂದು ತೊಂದರೆಗೆ ಯಾರಿಗೆ ದೂರಬೇಕು ಎನ್ನುವುದು ತಿಳಿಯಲೇ ಇಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಶೇಕಡ 18ರ ಜಿಎಸ್‌ಟಿ ಕಾರಣಕ್ಕಾದರೂ ಆರೋಗ್ಯ ವಿಮೆಯ ಬಗ್ಗೆ ವಿಷಯಗಳು ಮೇಲ್ಪಂತಿಗೆ ಬರುತ್ತಿದೆ ಹೇಳುವುದೇ ಒಂದು ಸಮಾಧಾನ.
ಈ ತೊಂದರೆಗಳಿಗೆ ಕೇಂದ್ರ ಸರಕಾರ ಸುಲಭವಾದಂತಹ ಒಂದು ಉಪಾಯವನ್ನು ಮಾಡಬಹುದಾಗಿದೆ. ಮೊದಲನೆಯದಾಗಿ ಈಗಾಗಲೇ ಇರುವ ವಿಮಾ ನಿಯಂತ್ರಣ ಪ್ರಾಧಿಕಾರವನ್ನು ಆರೋಗ್ಯ ವಿಮೆಗಳ ಪ್ರೀಮಿಯಂ ಏರಿಕೆಯನ್ನು ತಡೆಗಟ್ಟಲು ವಿಫಲವಾದ ಹಿನ್ನೆಲೆಯಲ್ಲಿ ವಿಸರ್ಜನೆಗೊಳಿಸಿ ಪ್ರಜೆಗಳ ಹಿತದೃಷ್ಟಿಯಿಂದ ಯೋಚಿಸುವ ಹಾಗೂ ಖಾಸಗಿ ಕಂಪನಿಗಳಿಗೆ ಬಗ್ಗದ ಹೊಸ ವಿಮಾ ನಿಯಂತ್ರಣ ಪ್ರಾಧಿಕಾರದ ರಚನೆಯನ್ನು ಮಾಡಬೇಕು. ಹಾಗೂ ಈ ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ನಿಯಂತ್ರಣವನ್ನು ತರುವಂತಾಗಬೇಕು.
ಎರಡನೇದು ಆಯುಷ್ಮಾನ್ ಭಾರತ ಯೋಜನೆಯನ್ನ ತಕ್ಕಮಟ್ಟಿನ ಪ್ರೀಮಿಯಂ’ನೊAದಿಗೆ ಆರೋಗ್ಯ ವಿಮೆಯ ಪೂರ್ಣ ಹಣ ಪಾವತಿಯಾಗುವಂತಹ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಕೈ ಹಾಕಬೇಕು. ಇದು ನೇರವಾಗಿ ಎಪಿಎಲ್ ಕಾರ್ಡಧಾರಕ ಪ್ರಜೆಗಳಿಗೆ ಕಷ್ಟದ ಸಮಯದಲ್ಲಿ ಅವರ ಆರೋಗ್ಯ ವಿಷಯಕ ಖರ್ಚು ವೆಚ್ಚಗಳ ನಿಗಾ ಇಡಲು ಅಭಯವಾಗುವುದರಲ್ಲಿ ಸಂಶಯವೇ ಇಲ್ಲ.
ಒಟ್ಟಾರೆಯಲ್ಲಿ ಕೇಂದ್ರ ಸರ್ಕಾರ ಹಣಕಾಸು ಸಚಿವಾಲಯ ಸಾಮಾನ್ಯ ಪ್ರಜೆಯ ಆರೋಗ್ಯದ ಖರ್ಚು ವೆಚ್ಚಗಳನ್ನು ನೀಗಿಸುವಂತಹ ಹೊಸ ಪ್ರೀಮಿಯಂ ಇರುವ ಆರೋಗ್ಯ ವಿಮೆಯ ವಿಚಾರಕ್ಕೆ ನಾಂದಿ ಹಾಡಬೇಕು. ಅಲ್ಲದೆ ಆರೋಗ್ಯ ವಿಮೆಯ ಪ್ರೀಮಿಯಂ ಇಳಿಕೆಗೆ ವಿರೋಧ ಪಕ್ಷದವರು ಪಟ್ಟು ಹಿಡಿಯಬೇಕು.
ವೈದ್ಯಕೀಯ ವಿಮೆಯಮೇಲಿನ ತೆರಿಗೆ ಅಷ್ಟೇ ಅಲ್ಲ, ಪ್ರೀಮಿಯಂನಲ್ಲೂ ಬದಲಾವಣೆ ಆಗಬೇಕು. ಅಲ್ಲದೆ ಈ ವಿಮೆಯ ನೀತಿ ನಿಯಮಗಳಲ್ಲಿ ಬದಲಾವಣೆ ಆಗಬೇಕು.ಅಲ್ಲದೇ ವಿಮಾ ಹೊಂದಿರುವ ರೋಗಿಗಳ ಕ್ಲೇಮ್ ನ ಹೊತ್ತಿಗೆ ತೊಂದರೆ ಕೊಡುವ ಆಸ್ಪತ್ರೆಗಳ ಮೇಲೆಯೂ ಕೂಡ ತೀವ್ರ ನಿಗಾ ವಹಿಸಬೇಕಿದೆ.
ಲೇಖಕರು: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ, ಶಿರಸಿ




Discussion about this post