ರಕ್ತ ನೀಡಲು ಯುವಕರನ್ನು ಪ್ರೇರೇಪಿಸುವ 52 ವರ್ಷದ ಮಕ್ಕಳ ತಜ್ಞ ಡಾ ದಿನೇಶ್ ಹೆಗಡೆ ಈವರೆಗೆ 60 ಸಲ ರಕ್ತದಾನ ಮಾಡಿದ್ದಾರೆ.
ಇದೀಗ ವರ್ಷಕ್ಕೆ ನಾಲ್ಕು ಬಾರಿ ರಕ್ತ ನೀಡುವುದು ಅವರ ಆಚರಣೆಯಾಗಿದೆ. 17ನೇ ವಯಸ್ಸಿನಿಂದಲೂ ಅವರು ರಕ್ತದಾನ ಮಾಡುತ್ತಿದ್ದಾರೆ. ಎಂಬಿಬಿಎಸ್ ಓದುವ ವೇಳೆ ಸ್ನೇಹಿತರ ಜೊತೆ ಸೇರಿ `ಲೈಫ್ ಲೈನ್ ಬ್ಲಡ್ ಡೋನರ್ಸ್’ ಎಂಬ ಗುಂಪು ರಚಿಸಿಕೊಂಡು ತುರ್ತು ಸನ್ನಿವೇಶದಲ್ಲಿ ರಕ್ತದಾನ ಮಾಡುವುದನ್ನು ಅವರು ರೂಢಿಸಿಕೊಂಡಿದ್ದರು. ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ವೇಳೆ ರೋಗಿಗಳ ಸಂಬoಧಿಕರು ರಕ್ತಕ್ಕಾಗಿ ಹುಡುಕಿಕೊಂಡು ಹಾಸ್ಟೇಲ್‌ಗೆ ಬರುತ್ತಿದ್ದರು. ರಕ್ತದಾನಕ್ಕೆ ಜನರು ಹಿಂದೇಟು ಹಾಕುವದು ನೋಡಿ ಬೇಸರವಾಗುತ್ತಿತ್ತು. ಆಗ ಅವರು ರೋಗಿಗಳ ಸಂಬoಧಿಕರಿಗೆ ರಕ್ತ ನೀಡುವ ಬಂಧುವಾಗುತ್ತಿದ್ದರು. ಇತರರನ್ನು ಪ್ರೇರೇಪಿಸಿ ರಕ್ತದಾನ ಮಾಡಿಸುತ್ತಿದ್ದರು. ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ವ್ಯಕ್ತಿಯ ದೇಹದ ತೂಕ ಸಮತೋಲನ, ಬೊಜ್ಜು ನಿಯಂತ್ರಣ ಸಾಧ್ಯ ಎಂಬುದನ್ನು ಅವರು ಸ್ವತಃ ಕಂಡು ಕೊಂಡಿದ್ದಾರೆ.
`ಜೀವ ಉಳಿಸಲು ರಕ್ತದಾನ ಮಾಡಿ’
– ದೀಪಾ ಹೆಗಡೆ, ಶಿರಸಿ




Discussion about this post