ಅತಿಯಾದ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹ, ಹಲವರ ಸಾವು ಸಂತ್ರಸ್ತರ ನೋವಿನ ನಡುವೆ ಈ ಮಳೆ ಕಟ್ಟಿಗೆ ಸಂಗ್ರಹಿಸುವ ಸವಾಲಿನ ಕೆಲಸ ಇದೀಗ ಸಲೀಸಾಗಿದೆ.
ಕರಾವಳಿಯಲ್ಲಿ ಸುರಿದ ವ್ಯಾಪಕ ಪ್ರಮಾಣದ ಮಳೆಯಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದರು. ನೂರಾರು ಗ್ರಾಮಗಳು ಜಲಾವೃತಗೊಂಡಿದ್ದವು. ಹಲವರು ಸಾವನಪ್ಪಿದ್ದರು. ವಾಹನ ಸಂಚಾರದ ಜೊತೆ ಜನಜೀವನ ಸಹ ಅಸ್ತವ್ಯಸ್ಥವಾಗಿತ್ತು. ಇದರಿಂದ ಎಲ್ಲರಿಗೂ ಸಮಸ್ಯೆ ಉಂಟಾಗಿತ್ತು. ಆದರೆ, ಇದೀಗ ನದಿ ಹಾಗೂ ಕಡಲತೀರದಲ್ಲಿ ಸಿಗುವ ಕಟ್ಟಿಗೆ ಆರಿಸುವವರಿಗೆ ಈ ಮಳೆ ವರ ನೀಡಿದೆ.
ಕಡಲತೀರದಲ್ಲಿ ರಾಶಿ ಸಂಖ್ಯೆಯಲ್ಲಿ ಬಿದ್ದರುವ ಉರುವಲು ಕಟ್ಟಿಗೆ ಸಂಗ್ರಹಕ್ಕೆ ಅಕ್ಕ-ಪಕ್ಕದ ಊರಿನವರು ಪೈಪೋಟಿಗೆ ಇಳಿದಿದ್ದಾರೆ. `ಪ್ರತಿ ವರ್ಷ ಕಟ್ಟಿಗೆ ಸಂಗ್ರಹಿಸುವುದು ಸಾಹಸದ ಕೆಲಸವಾಗಿದ್ದು, ಈ ಬಾರಿ ಆ ಕೆಲಸ ಸಲೀಸಾಗಿದೆ. ಕೆಲವು ಕಡೆ ದೊಡ್ಡ ದೊಡ್ಡ ದಿಮ್ಮಿಗಳು ಸಿಕ್ಕಿದೆ’ ಎಂದು ಕಟ್ಟಿಗೆ ಆರಿಸುವ ಗಂಗಾವಳಿಯ ಯಶೋಧಾ ಹೇಳಿದರು. `ಪೀಠೋಪಕರಣಕ್ಕೆ ಅನುಕೂಲವಾಗುವ ಕಟ್ಟಿಗೆ ಸಿಗಲಿಲ್ಲ. ಆದರೆ, ಮುಂದಿನ ಎರಡು ವರ್ಷ ಉರುವಲಿಗೆ ಸಮಸ್ಯೆ ಇಲ್ಲ’ ಎಂದವರು ತಿಳಿಸಿದರು.
ಹಲವು ಕಡಲತೀರ ಹಾಗೂ ನದಿ ಅಂಚಿನಲ್ಲಿ ಗುಂಪು ಗುಂಪಾಗಿ ಕಟ್ಟಿಗೆಗಳನ್ನು ರಾಶಿ ಹಾಕಲಾಗಿದೆ. ಮಹಿಳೆಯರು ತಲೆಮೇಲೆ ಹೊತ್ತು ಇವುಗಳನ್ನು ಮನೆಗೆ ಸಾಗಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಾಣಬರುತ್ತಿದೆ.




Discussion about this post