ಕುಮಟಾ: ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡಿದರು.
ವಿದ್ಯಾರ್ಥಿಗಳ ಶಾಲಾ ಸಂಸತ್ ಮತ್ತು ವಿವಿಧ ವಿಷಯ ಸಂಘಗಳ ಉದ್ಘಾಟನೆ ಹಾಗೂ ಅತಿಥಿಗಳ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ ಒಟ್ಟಿಗೆ ನೆಡೆಯಿತು. ಶಾಲೆಯ ಮಾಜಿ ವಿದ್ಯಾರ್ಥಿ ಎಂ. ಜಿ. ಭಟ್ಟ ವನಮಹೋತ್ಸವ ಆಚರಣೆಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿದರು. `ಭಾರತೀಯ ಸಂಸ್ಕೃತಿ-ಸAಸ್ಕಾರ ಸಂಪ್ರದಾಯಗಳು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮೂಲಕ ಸದಾ ಜಾಗೃತವಾಗಿರಬೇಕು’ ಎಂದವರು ಕರೆ ನೀಡಿದರು. ಶಾಲೆಯ ಶೈಕ್ಷಣಿಕ ಸಲಹೆಗಾರ ಎಂ. ಟಿ. ಗೌಡ ಮುಖ್ಯ ಅತಿಥಿಯಾಗಿದ್ದರು.
ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಜಿ. ಭಟ್ಟ ಸ್ವಾಗತಿಸಿದರು. ಸಹ ಶಿಕ್ಷಕ ರಾಜು ಟಿ ಲಮಾಣಿ ವಂದಿಸಿದರು. ಸಹ ಶಿಕ್ಷಕ ರಾಮಚಂದ್ರ ಮಡಿವಾಳ ನಿರ್ವಹಿಸಿದರು.
Discussion about this post