ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ `ನಶಾಮುಕ್ತ ಭಾರತ ಅಭಿಯಾನ’ಕ್ಕೆ ಕರೆ ನೀಡಿದ್ದು, ಈ ಹಿನ್ನಲೆ ಆಗಸ್ಟ್ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಹಾಗೂ ಇನ್ನಿತರ ಶೈಕ್ಷಣಿಕ ಸಂಸ್ಥೆಗಳಲ್ಲಿ `ಮಾದಕ ವಸ್ತು ಬಳಸಲ್ಲ’ ಎಂದು ಪ್ರತಿಜ್ಞೆ ಸ್ವೀಕರಿಸಲು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಕರೆ ನೀಡಿದ್ದಾರೆ.
ಅಗಸ್ಟ 12ರ ಬೆಳಗ್ಗೆ 9 ಗಂಟೆಗೆ ಪ್ರತಿಯೊಬ್ಬರು ಪ್ರತಿಜ್ಞೆ ಸ್ವೀಕರಿಸಬೇಕು. ನಂತರ ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿಚಾರಗೋಷ್ಠಿ ಹಾಗೂ ಕಾರ್ಯಗಾರಗಳನ್ನು ನಡೆಸಬೇಕು. ಜೊತೆಗೆ ಈ ಬಗ್ಗೆ ಜನ ಜಾಗೃತಿಗಾಗಿ ಮೆರವಣಿಗೆ, ಮ್ಯಾರಥಾನ್, ಬೀದಿ ನಾಟಕಗಳನ್ನು ಆಯೋಜಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಸಹ `ನಶಾಮುಕ್ತ ಭಾರತ್ ಅಭಿಯಾನ’ದ ನೆನಪಿನ ಪ್ರಯುಕ್ತ ಕನಿಷ್ಟ ಒಂದು ಗಿಡ ನೆಡಬೇಕು. ಸ್ವಾತಂತ್ರ‍್ಯ ದಿನಾಚರಣೆಯ ದಿನದಂದು ಮುಖ್ಯ ಆತಿಥಿಗಳ ಭಾಷಣದಲ್ಲಿ `ನಶಾಮುಕ್ತ ಭಾರತ ಅಭಿಯಾನ’ದ ಕುರಿತು ಭಾಷಣ ಮಾಡಿಸಬೇಕು. ಶೈಕ್ಷಣಿಕ ಸಂಸ್ಥೆಗಳ ಜೊತೆ ಇತರೆ ಕಚೇರಿ, ವಸತಿ ನಿಲಯಗಳಲ್ಲಿ ಸಹ ಸಹ ಇದನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಸೂಚಿಸಿದ್ದಾರೆ.






Discussion about this post