ಕುಮಟಾ: ನಿವೃತ್ತ ಪೊಲೀಸ್ ಅಧಿಕಾರಿ ಮಧುಕರ ಶಂಕರ ಮಹಾಲೆ ರೈಲಿನಲ್ಲಿ ಹೋಗುವಾಗ ಕಳೆದುಕೊಂಡಿದ್ದ ಪರ್ಸನ್ನು ನಿವೃತ್ತ ಮುಖ್ಯ ಶಿಕ್ಷಕ ಸುಕ್ರು ದೇವು ಗೌಡ ಹಿಂತಿರುಗಿಸಿದ್ದಾರೆ.
ಕಾರವಾರ ಮೂಲದ ಮಧುಕರ ಶಂಕರ ಮಹಾಲೆ ತಮ್ಮ ಪತ್ನಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಮಂಗಳೂರು ಆಸ್ಪತ್ರೆಗೆ ಆ 8ಕ್ಕೆ ತೆರಳಿದ್ದರು. ಮರಳಿ ಬರುವಾಗ ಮಂಗಳೂರು-ಗೋವಾ ರೈಲಿನಲ್ಲಿ ಪ್ರಯಾಣಿಸಿದ್ದರು. ಮನೆಗೆ ಬಂದು ನೋಡಿದಾಗ ಅವರ ಜೇಬಿನಲ್ಲಿದ್ದ ಪರ್ಸ ಇರಲಿಲ್ಲ. ಸಾವಿರಾರು ರೂ ಹಣದ ಜೊತೆ ಎಟಿಎಂ, ಆಧಾರ್ ಕಾರ್ಡ್ ಸೇರಿ ಹಲವು ದಾಖಲೆಗಳು ಪರ್ಸಿನ ಜೊತೆ ಕಾಣೆಯಾಗಿತ್ತು.
ಈ ಪರ್ಸ ಅಘನಾಶಿನಿ ಮೂಲದ ನಿವೃತ್ತ ಮುಖ್ಯ ಶಿಕ್ಷಕ ಸುಕ್ರು ದೇವು ಗೌಡ ಅವರಿಗೆ ಸಿಕ್ಕಿದ್ದು, ಪರ್ಸಿನಲ್ಲಿದ್ದ ಫೋನ್ ನಂ’ಗೆ ಅವರು ಕರೆ ಮಾಡಿದ್ದರು. ತಮಗೆ ರೈಲಿನ ಶೌಚಾಲಯದ ಬಳಿ ಪರ್ಸ ಸಿಕ್ಕಿರುವ ಬಗ್ಗೆ ಗೌಡರು ಹೇಳಿ ಅದನ್ನು ಅವರಿಗೆ ಮರಳಿಸಿದರು.





Discussion about this post