ಕಾರವಾರ: ಸಾರ್ವಜನಿಕ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕಾಳಿ ಸೇತುವೆ ಮೇಲೆ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ.
ಕಾಳಿ ನದಿಗೆ ಅಡ್ಡಲಾಗಿರುವ ನೂತನ ಸೇತುವೆಗೆ ಇಷ್ಟು ದಿನಗಳ ಕಾಲ ಬೆಳಕಿನ ವ್ಯವಸ್ಥೆಯೇ ಇರಲಿಲ್ಲ. ಹಳೆಯ ಸೇತುವೆಗೆ ಅಳವಡಿಸಿದ್ದ ಬೆಳಕಿನ ಕಿರಣಗಳನ್ನು ನಂಬಿ ಸೇತುವೆ ಮೇಲೆ ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ, ಹಳೆಯ ಸೇತುವೆ ಮುರಿದ ಕಾರಣ ಈ ಮಾರ್ಗ ಸಂಪೂರ್ಣ ಕತ್ತಲಾಗಿತ್ತು. ಇದರಿಂದ ವಾಹನ ಸವಾರರ ಜೊತೆ ಪಾದಚಾರಿ ಹಾಗೂ ಸೈಕಲ್ ಸವಾರರಿಗೆ ಸಮಸ್ಯೆಯಾಗಿತ್ತು.
ಬೆಳಕು ಇಲ್ಲದ ಕಾರಣ ವಾಹನ ಅಪಘಾತದ ಪ್ರಮಾಣ ಹೆಚ್ಚಾಗುವ ಬಗ್ಗೆ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಹೊಸ ಸೇತುವೆ ಮೇಲೆ ದ್ವಿ ಮಾರ್ಗದ ಸಂಚಾರ ಶುರುವಾಗಿದ್ದರಿಂದ ಇನ್ನಷ್ಟು ಸಮಸ್ಯೆ ಆಗಿರುವ ಬಗ್ಗೆ ರೋಷನ್ ಹರಿಕಂತ್ರ ಹಾಗೂ ಪ್ರದೀಪ ಶೆಟ್ಟಿ ಸಹ ಕೂಡಲೇ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದರು.
`ಹೆದ್ದಾರಿ ನಿರ್ಮಾಣದ ಗುತ್ತಿಗೆವಹಿಸಿಕೊಂಡ ಐ ಆರ್ ಬಿ ಕಂಪನಿಗೆ ಈ ಬಗ್ಗೆ ಸೂಚಿಸಬೇಕು’ ಎಂದು ರಫೀಕ್ ಹುದ್ದಾರ್, ಸುದೇಶ್ ನಾಯ್ಕ, ಸುನೀಲ್ ತಾಂಡೆಲ್, ಮೋಹನ ಉಳ್ವೇಕರ್ ಇತರರು ಒತ್ತಾಯಿಸಿದ್ದರು. ಇದೀಗ ಜಿಲ್ಲಾಧಿಕಾರಿ ಆ ಭಾಗದಲ್ಲಿ ತಾತ್ಕಾಲಿಕ ಕಂಬ ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ.
ಕಾಳಿ ನದಿ ಸೇತುವೆಗೆ ಬೆಳಕಿನ ವ್ಯವಸ್ಥೆ ಇಲ್ಲದ ಬಗ್ಗೆ `S News ಡಿಜಿಟಲ್’ ಅಗಸ್ಟ 8ರಂದು ವರದಿ ಪ್ರಕಟಿಸಿದ್ದು, ಅದನ್ನು ಇಲ್ಲಿ ಓದಿ..




Discussion about this post