ಕಳೆದ ಕೆಲ ವರ್ಷಗಳಿಂದ ಇಂಡಿ-ವಾಸ್ಕೊ ಹಾಗೂ ತಾಳಿಕೋಟಿ-ವಾಸ್ಕೊ ಬಸ್ಸು ಸಂಚಾರ ಸ್ಥಗಿತಗೊಂಡಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬೆನ್ನಲ್ಲೆ ಕರ್ನಾಟಕ ರಕ್ಷಣಾ ವೇದಿಕೆಯವರು ಹೋರಾಟ ನಡೆಸಿದ್ದು, ನಿರಂತರ ಹೋರಾಟದ ಫಲವಾಗಿ ಬಸ್ಸು ಓಡಾಟ ಮತ್ತೆ ಶುರುವಾಗಿದೆ. ಅಗಸ್ಟ 11ರಂದು ಇಂಡಿ-ವಾಸ್ಕೊ, ತಾಳಿಕೋಟಿ-ವಾಸ್ಕೊ ಬಸ್ ಓಟಾಟಕ್ಕೆ ಮರುಚಾಲನೆ ದೊರೆಯಿತು.
ಈ ಬಸ್ ಓಡಾಟಕ್ಕೆ ಆಗ್ರಹಿಸಿ ರಕ್ಷಣಾ ವೇದಿಕೆಯವರು ಗೋವಾದ ಪಣಜಿಯಲ್ಲಿ 6 ತಾಸು ಇತರೆ ಬಸ್ಸುಗಳ ಸಂಚಾರ ತಡೆದು ಪ್ರತಿಭಟಿಸಿದ್ದರು. ಸಾರಿಗೆ ಸಚಿವರನ್ನು ಸಹ ಭೇಟಿ ಮಾಡಿ ಈ ಬಗ್ಗೆ ಒತ್ತಾಯಿಸಿದ್ದರು. ಉಳಿದ ಬಸ್ಸುಗಳ ಓಡಾಟಕ್ಕೆ ಸಹ ಮರುಚಾಲನೆ ನೀಡಬೇಕು ಎಂದು ಸಂಘಟನೆಯವರು ಆಗ್ರಹಿಸಿದ್ದಾರೆ.
ಈ ಕುರಿತು ರಕ್ಷಣಾ ವೇದಿಕೆಯವರು ಮಾತನಾಡಿದ ವಿಡಿಯೋ ಇಲ್ಲಿ ನೋಡಿ..
Discussion about this post