6
September 29, 2026

Artist | ಕಲಾವಿದನ ನೆನಪಿನಲ್ಲಿ ಕಲಾಸೇವೆ

ಸಿದ್ದಾಪುರ: ಕಾನಸೂರಿನಲ್ಲಿ ನಡೆದ `ಅಂಗದ-ಸ0ಧಾನ’ (Artist) ತಾಳಮದ್ದಲೆ ನೆರೆದಿದ್ದವರ ಮನರಂಜಿಸಿತು.

ಯಕ್ಷಪ್ರೇಮಿ (Artist) ನಾಗೇಶ ಶೇಟರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಇದನ್ನು ಆಯೋಜಿಸಲಾಗಿತ್ತು. ಸಂತೋಷ ಶೇಟ ಕಾರ್ಯಕ್ರಮ ಸಂಘಟಿಸಿದ್ದರು.

ನಾಟ್ಯಾಚಾರ್ಯ ಶಂಕರ ಭಟ್ಟರ ಅಂಗದ ಹಾಗೂ ಸುಬ್ರಾಯ ಹೆಗಡೆ ಕೆರೆಕೊಪ್ಪರವರ ರಾವಣ ಸಂವಾದ ಗಮನಸೆಳೆಯಿತು. ಉಮಾಕಾಂತ ಹೆಗಡೆ ಮಾದನಕಳ್‌ರವರ ರಾಮ, ಚಂದ್ರಶೇಖರ ಹೆಗಡೆ ಮಾದನಕಳ್ ರವರ ಸುಗ್ರೀವ, ರತ್ನಾಕರ ಭಟ್ ಕಾನಸೂರ್ ಪ್ರಹಸ್ತ ಜನಮೆಚ್ಚುಗೆ ಪಡೆಯಿತು.

ಹಿಮ್ಮೇಳದಲ್ಲಿ ಗಣಪತಿ ಹೆಗಡೆ ಕಲ್ಲಳ್ಳಿಯವರ ಭಾಗವತಿಕೆ, ಶ್ರೀಪತಿ ಹೆಗಡೆ ಕಂಚಿಮನೆಯವರ ಮದ್ದಳೆ ಪ್ರೇಕ್ಷರನ್ನು ರಂಜಿಸಿತು. ಈ ವೇಳೆ ಸಂತೋಷ ಸಿಗಂದೂರ್ ಹಾಗೂ ಗಣೇಶ ಶೇಟ್ ಕಾನಸೂರು ಕಲಾವಿದರನ್ನು ಗೌರವಿಸಿದರು.

Leave a Reply

Your email address will not be published. Required fields are marked *

You cannot copy content of this page