Leopard | ಗದ್ದೆಗೆ ನುಗ್ಗಿದ ವನ್ಯಜೀವಿ: ಶಾಲೆ ಸುತ್ತ ಚಿರತೆ ಓಡಾಟ
ಕುಮಟಾ ಬಾಡ ಜನತಾ ವಿದ್ಯಾಲಯದ ಬಳಿ ಚಿರತೆ (Leopard) ಓಡಾಟ ನಡೆಸಿದೆ. ಬುಧವಾರ ಮಧ್ಯಾಹ್ನ ಇಲ್ಲಿನ ಅರುಣ ಗುನಗಾ ಎಂಬಾತದ ಗದ್ದೆಯಲ್ಲಿ ಚಿರತೆ ಕಂಡ ವ್ಯಕ್ತಿಯೊಬ್ಬ ಅದನ್ನು ಮೊಬೈಲ್ ಮೂಲಕ ಚಿತ್ರಿಕರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಚಿರತೆ ನೋಡಿದ ಜನ ಭಯಗೊಂಡಿದ್ದು, ಅರಣ್ಯ ಇಲಾಖೆಯವರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಭತ್ತದ ಗದ್ದೆಯಲ್ಲಿ ಚಿರತೆ ಓಡಾಟ ನಡೆಸಿದೆ. ಚಿರತೆ ಹೆಜ್ಜೆ ನೋಡಿದ ಅರಣ್ಯಾಧಿಕಾರಿಗಳು ಅದು ಯಾವ ಕಡೆ ಹೋಗಿದೆ? ಎಂದು ಅಂದಾಜಿಸಿದ್ದಾರೆ. ಮತ್ತೆ ಚಿರತೆ ಬಂದರೆ ತಕ್ಷಣ ಮಾಹಿತಿ ಕೊಡುವಂತೆಯೂ ಸ್ಥಳೀಯರಿಗೆ ಹೇಳಿದ್ದಾರೆ.
ಈ ಹಿಂದೆ ಬಾಡದ ವ್ಯಕ್ತಿಯೊಬ್ಬರ ಮನೆಗೆ ಚಿರತೆ ಆಗಮಿಸಿತ್ತು. ನಂತರ ಅರಣ್ಯ ಇಲಾಖೆಯವರು ಅರವಳಿಕೆ ನೀಡಿ ಅದನ್ನು ಸ್ಥಳಾಂತರಿಸಿದ್ದರು.
ಬುಧವಾರ ಮಧ್ಯಾಹ್ನ ಗದ್ದೆಯಲ್ಲಿ ಕಾಣಿಸಿಕೊಂಡ ಚಿರತೆಯ ವಿಡಿಯೋ ಇಲ್ಲಿ ನೋಡಿ…
