ಕಾಳಿ ಸೇತುವೆ ಕುಸಿತ ಪರಿಣಾಮ ನದಿಗೆ ಬಿದ್ದಿದ್ದ ತಮಿಳುನಾಡಿನ ಲಾರಿಯನ್ನು (Truck) ನಿರಂತರ ಕಾರ್ಯಾಚರಣೆ ನಂತರ ದಡಕ್ಕೆ ತರಲಾಗಿದೆ.
ಅಗಸ್ಟ 7ರಂದು ಕಾಳಿ ಸೇತುವೆ ಕುಸಿತವಾದಾಗ ಈ ಲಾರಿ ನೀರುಪಾಲಾಗಿತ್ತು. ಲಾರಿಯಲ್ಲಿದ್ದ ಚಾಲಕ ಬಾಲಮುರುಗನ್’ನನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ, ನಿರಂತರ ಮಳೆ ಹಾಗೂ ನದಿ ಹರಿವು ರಭಸವಾಗಿದ್ದರಿಂದ ಲಾರಿಯನ್ನು ಮೇಲೆ ತರಲು ಸಾಧ್ಯವಾಗಿರಲಿಲ್ಲ. ಇದೀಗ ಮುಳುಗು ತಜ್ಞ ಈಶ್ವರ ಮಲ್ಪೆ ಆಗಮಿಸಿ ಲಾರಿಯನ್ನು ಮೇಲೆತ್ತುವ ಕೆಲಸಕ್ಕೆ ಕೈ ಜೋಡಿಸಿದರು.
ಲಾರಿ ನದಿ ಆಳದಲ್ಲಿ ಮುಳುಗಡೆಯಾಗಿತ್ತು. ಅದನ್ನು ಕ್ರೇನ್ ಮೂಲಕ ಮೇಲಕ್ಕೆತ್ತುವ ಕಾರ್ಯ ಆಗುತ್ತಿರಲಿಲ್ಲ. ನದಿ ಆಳದಲ್ಲಿ ಹೋಗಿ ರೋಪ್ ಕಟ್ಟುವುದು ಸಮಸ್ಯೆಯಾಗಿದ್ದು, ಈಶ್ವರ ಮಲ್ಪೆ ಈ ಕೆಲಸ ಮಾಡಿಕೊಟ್ಟರು. ನದಿ ಆಳದಲ್ಲಿರುವ ಕಲ್ಲುಗಳ ಬಗ್ಗೆಯೂ ಅವರು ಮಾಹಿತಿ ನೀಡಿ, ಕಲ್ಬಂಡೆಗಳನ್ನು ತಪ್ಪಿಸಿ ಲಾರಿ ಮೇಲೆ ಬರಲು ಸಹಕರಿಸಿದರು.
ಲಾರಿಯನ್ನು ನೀರಿನಿಂದ ಹೊರ ತೆಗೆಯುವಂತೆ ಮೊನ್ನೆ ರಾತ್ರಿ ಅದರ ಮಾಲಕರು ರಂಪಾಟ ನಡೆಸಿದ್ದರು. ಲಾರಿ ತೆಗೆಯದಿರುವುದನ್ನು ವಿರೋಧಿಸಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದರು. ಲಾರಿ ಇದೀಗ ಹೊರ ಬಂದಿದ್ದು, ರಿಪೇರಿ ಕಷ್ಟ. ಸಾಗಾಣಿಕೆ ದುಬಾರಿ ಎನ್ನುವ ಪರಿಸ್ಥಿತಿಯಲ್ಲಿ ಲಾರಿ ಮಾಲಕರಿದ್ದಾರೆ.





Discussion about this post