6
  • Latest
Shiruru | ಶಿರೂರು ಗುಡ್ಡ – ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು – ನೀರಿನ ಅಡಿ ಮಣ್ಣಾದ ರಹಸ್ಯಗಳೇನು?

Shiruru | ಶಿರೂರು ಗುಡ್ಡ – ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು – ನೀರಿನ ಅಡಿ ಮಣ್ಣಾದ ರಹಸ್ಯಗಳೇನು?

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

Shiruru | ಶಿರೂರು ಗುಡ್ಡ – ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು – ನೀರಿನ ಅಡಿ ಮಣ್ಣಾದ ರಹಸ್ಯಗಳೇನು?

AchyutKumar by AchyutKumar
in ವಿಡಿಯೋ

ಜುಲೈ 16ರ ಬೆಳಗ್ಗೆ 8.35ರ ಆಸುಪಾಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರು (Shiruru) ಗುಡ್ಡ ಕುಸಿದು ಗಂಗಾವಳಿ ನದಿಯ ಪಾಲಾಯಿತು. ಮೊದಲ ಒಂದು ವಾರದವರೆಗೆ ಸರಿಯಾದ ಸಾವು-ನೋವಿನ ಸಂಖ್ಯೆ ಯಾರಿಗೂ ಗೊತ್ತಾಗುವ ಹಾಗಿರಲಿಲ್ಲ. ಕಾರ್ಯಾಚರಣೆ ಶುರುವಾದ ನಂತರ ಎರಡು ವಾರಗಳವರೆಗೂ ಎಲ್ಲವೂ ಗೊಂದಲಗಳಿoದಲೇ ಕೂಡಿತ್ತು. ಪ್ರಸ್ತುತ ಶಿರೂರು ಗುಡ್ಡ ಕುಸಿತವಾಗಿ ಒಂದು ತಿಂಗಳಾಗಿದ್ದು, ಈವರೆಗೆ 8 ಜನರ ಶವ ಹಾಗೂ ಲಾರಿಯ ಕೆಲ ಬಿಡಿಭಾಗಗಳು ಮಾತ್ರ ಸಿಕ್ಕಿವೆ. ಮೂವರು ಕಣ್ಮರೆಯಾದ ಬಗ್ಗೆ ಅಧಿಕೃತ ಮಾಹಿತಿ ಇದೆ. ಇದನ್ನು ಹೊರತುಪಡಿಸಿ ನದಿ ಹಾಗೂ ಮಣ್ಣಿನ ಅಡಿಯ ಅನೇಕ ಜೀವಬಿಟ್ಟ ಜೀವ ಸಂಕುಲದ ರಹಸ್ಯಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿ ಪಾಲಾಗಿದ್ದ ಲಾರಿಯ ಹುಡುಕಾಟ ಮುಂದುವರೆದಿದೆ. ಈವರೆಗೆ ಡ್ರೋಣ್, ಹೆಲಿಕಾಪ್ಟರ್ ಸೇರಿ ನಾನಾ ಬಗೆಯ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಎನ್‌ಡಿಆರ್‌ಎಫ್, ಭಾರತೀಯ ನೌಕಾದಳ, ಮಿಲಟರಿ ಪಡೆ ಸೇರಿ ಸಾಕಷ್ಟು ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಮುಳುಗು ತಜ್ಞ ಈಶ್ವರ ಮಲ್ಪೆ ಆಗಮಿಸಿ ನೀರಿನ ಆಳದಲ್ಲಿ ಹುಡುಕಾಟ ನಡೆಸಿದ್ದು, ಕಣ್ಮರೆಯಾದ ಮೂವರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಲಾರಿ ಇರುವ ಜಾಗ ಖಚಿತವಾಗಿದ್ದು, ಅದನ್ನು ಮೇಲೆತ್ತುವುದು ಸಹ ಸುಲಭವಾಗಿಲ್ಲ.

ಶುಕ್ರವಾರ ಸಹ ಈಶ್ವರ ಮಲ್ಪೆ ಸ್ಥಳದಲ್ಲಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಕೆಲ ಅವಶೇಷಗಳು ಮಾತ್ರ ಸಿಗುತ್ತಿದ್ದು, ನೀರಿನ ಒಳಗೆ ಎಲ್ಲಿ ನೋಡಿದರೂ ಭಾರೀ ಪ್ರಮಾಣದ ಮಣ್ಣು ಕಾಣುತ್ತಿದೆ. ಒಂದಷ್ಟು ಮರಗಳು ಮುರಿದುಬಿದ್ದಿದೆ. ಮರಗಳ ಅಡಿಯಲ್ಲಿ ಲಾರಿ ಇರುವ ಕಾರಣ ಅದನ್ನು ಹೊರತೆಗೆದ ನಂತರವೇ ಮುಂದಿನ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಶುಕ್ರವಾರ ಮರಗಳನ್ನು ಅಲ್ಲಿಂದ ಹೊರತೆಗೆಯುವ ಪ್ರಯತ್ನ ಸಾಗಿದೆ.
ಶುಕ್ರವಾರ ನಡೆದ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ..

 

ShareSendTweetShare
Previous Post

Yakshagana | ಕಾಲೇಜು ಮಕ್ಕಳಿಗೆ ಕಥೆ ಹೇಳಿದ ಯಕ್ಷಕನ್ಯೆ!

Next Post

Student achievement | ಗೌಳಿವಾಡದಲ್ಲಿ ಹಬ್ಬದ ವಾತಾವರಣ: ಸಾಧಕ ವಿದ್ಯಾರ್ಥಿನಿಗೆ ಯುವ ಸೇನೆಯಿಂದ ಸನ್ಮಾನ

Next Post

Student achievement | ಗೌಳಿವಾಡದಲ್ಲಿ ಹಬ್ಬದ ವಾತಾವರಣ: ಸಾಧಕ ವಿದ್ಯಾರ್ಥಿನಿಗೆ ಯುವ ಸೇನೆಯಿಂದ ಸನ್ಮಾನ

Shiruru | ನದಿ ಆಳದಲ್ಲಿ ಸಿಕ್ಕಿದ ಸಾಮಗ್ರಿ ಅರ್ಜುನನ ಲಾರಿದಲ್ಲ!

Uttara kannada | `ಕುಂಬ್ರಿ ಮರಾಠಿ ಮೀಸಲಾತಿಗೆ ಎರಡು ದಶಕ'

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.