ಶಿರೂರು (Shiruru) ಗುಡ್ಡದ ಮುಂದಿನ ಗಂಗಾವಳಿ ನದಿ ಆಳದಲ್ಲಿ ಶುಕ್ರವಾರ ಲಾರಿಯ ಬಿಡಿಭಾಗವೊಂದು ದೊರೆತಿದೆ. ಆದರೆ, ಇದು ಅರ್ಜುನನ ಲಾರಿಗೆ ಸೇರಿದ್ದಲ್ಲ!
ಮುಳುಗು ತಜ್ಞ ಈಶ್ವರ ಮಲ್ಪೆ (Ishwar malpe) ಶುಕ್ರವಾರ ನದಿ ಆಳಕ್ಕೆ ತೆರಳಿದಾಗ ಅಲ್ಲಿ ಅಂದಾಜು 15 ಕೆಜಿ ಬಾರದ ಕಬ್ಬಿಣದ ಲೋಹ ಕಾಣಿಸಿಕೊಂಡಿದ್ದು, ಅದನ್ನು ಹೊರ ತೆಗೆದರು. ಆಗ ಅಲ್ಲಿ ಓಡೋಡಿ ಬಂದ ಕೇರಳದ ಲಾರಿ ಮಾಲಕ ಈ ಸಾಮಗ್ರಿ ತನ್ನ ಲಾರಿಯದ್ದಲ್ಲ ಎಂದು ಹೇಳಿದ್ದಾರೆ. ಆದರೆ, ಇದು ಲಾರಿಗೆ ಸಂಬ0ಧಿಸಿದ ಲೋಹ ಎಂಬುದು ಖಚಿತವಾಗಿದ್ದು, ನೀರಿನ ಆಳದಲ್ಲಿ ಇನ್ನೊಂದು ಲಾರಿ ಇದೆಯಾ? ಎಂಬ ಅನುಮಾನ ವ್ಯಕ್ತವಾಗಿತ್ತು.
ಶಿರೂರು ಗುಡ್ಡ ಕುಸಿತದ ದಿನ ಮೂರು ಗ್ಯಾಸ್ ಟ್ಯಾಂಕರ್ ನದಿ ಪಾಲಾಗಿದ್ದು, ಅದಕ್ಕೆ ಸಂಬ0ಧಿಸಿದ ಲೋಹ ಇದಾಗಿರಬಹುದು ಎಂದು ಶಂಕಿಸಲಾಗಿದೆ.






