ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಅಮದಳ್ಳಿಯ ಯಶ್ವಂತ ವೆಂಕಪ್ಪ ಬೊಬ್ರುಕರ್ (47) ಎಂಬಾತರು ಎದೆನೋವಿನಿಂದ ಬಳಲಿ ಸಾವನಪ್ಪಿದ್ದಾರೆ.
ಅಮದಳ್ಳಿಯ ಬ್ರಹ್ಮದೇವವಾಡದವರಾಗಿದ್ದ ಅವರು ನಿರ್ಮಲಾ ಫಿಶಿಂಗ್ ಬೋಟಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅಗಸ್ಟ 19ರಂದು ಅಮದಳ್ಳಿಯಿಂದ ಮುದುಗಾವರೆಗೆ ಬೋಟಿನಲ್ಲಿ ಹೋದ ಅವರು ಮುದುಗಾ ಬಂದರು ಬಳಿ ನಿಂತಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ.
ಅಲ್ಲಿ ಕುಸಿದುಬಿದ್ದ ಅವರನ್ನು ತಕ್ಷಣ ಸ್ಥಳೀಯರು ಉಪಚರಿಸಿದರು. ನಂತರ ರಿಕ್ಷಾ ಮೂಲಕ ಕಾರವಾರ ಆಸ್ಪತ್ರೆಗೆ ದಾಖಲಿಸಿದರು. ಪರೀಕ್ಷಿಸಿದ ವೈದ್ಯರು ಅವರು ಸಾವನಪ್ಪಿರುವ ಬಗ್ಗೆ ಘೋಷಿಸಿದರು.




Discussion about this post