ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಮಹಾರಾಷ್ಟ್ರ ಕುಟುಂಬದವರ ಮೇಲೆ ಸೋಮವಾರ ನಾಯಿ ದಾಳಿ ನಡೆಸಿದೆ. ಅದರಲ್ಲಿಯೂ ಆ ಕುಟುಂಬ ಪುಟ್ಟ ಬಾಲಕಿ ಮೇಲೆ ಹುಚ್ಚುನಾಯಿ ಕುಸ್ತಿಗೆ ಇಳಿದಿದ್ದು, ಕಾರವಾರ ನಗರಸಭೆ ಮಾಜಿ ಸದಸ್ಯ ಅನೀಲ ನಾಯ್ಕ ಬಾಲಕಿಯನ್ನು ರಕ್ಷಿಸಿದರು.
ಕಾರವಾರದ ಮುಖ್ಯ ಕಡಲತೀರದಲ್ಲಿ ಉಮರಗಾವಿನ ಸುನಿಲ್ ರೆಡ್ಡಿ ಎಂಬಾತರು ಕುಟುಂಬದ ಜೊತೆ ಆಗಮಿಸಿದ್ದರು. ಅವರ ಕುಟುಂಬದವರು ಸಾರಿಗೆ ಇಲಾಖೆ ಕಚೇರಿ ಬಳಿ ತೆರಳಿದಾಗ ಅವರ ಮಗು ಶ್ರೇಷ್ಟಾ ರೆಡ್ಡಿ ಮೇಲೆ ನಾಯಿ ದಾಳಿ ನಡೆಸಿದೆ. ಪರಿಣಾಮ ಮಾರುತಿ ಮೂರ್ತಿ ಬಳಿ ಶ್ರೇಷ್ಟಾ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಆಗ ಅಲ್ಲಿಯೇ ಇದ್ದ ಅನಿಲ ನಾಯ್ಕ ತಮ್ಮ ಜೊತೆಗಾರ ಗಣಪತಿ ಅವರ ಜೊತೆ ಸೇರಿ ಬಾಲಕಿಯನ್ನು ಮೇಲೆತ್ತಿ ನಾಯಿಯನ್ನು ಓಡಿಸಿದ್ದಾರೆ.
ನಾಯಿ ದಾಳಿಗೆ ಒಳಗಾದ ಬಾಲಕಿಯನ್ನು ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದು, ಅಲ್ಲಿ ನಾಯಿ ದಾಳಿಗೆ ಒಳಗಾದವರಿಗೆ ಅಗತ್ಯವಿರುವ ಔಷಧಿ ಇರಲಿಲ್ಲ. ಈ ಬಗ್ಗೆ ಅನಿಲ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ಕುಮಟಾದಿಂದ ಔಷಧಿ ತರಿಸಿಕೊಡುವುದಾಗಿ ಮೇಲಾಧಿಕಾರಿಗಳು ತಿಳಿಸಿದ್ದು, ರಾತ್ರಿಯಾದರೂ ಔಷಧಿ ಬರದ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದರು.
ಗಾಯಗೊಂಡ ಬಾಲಕಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಕಾಯುತ್ತಿದ್ದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..
Discussion about this post