ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಅವರಿಗೆ ವಿಪ್ ಜಾರಿ ಮಾಡಿದ್ದಾರೆ.
ಬಿಜೆಪಿ ಪಕ್ಷದ ಚಿಹ್ನೆ ಅಡಿ ಚುನಾಯಿತರಾಗಿ ಶಾಸಕರಾದ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಚಿಹ್ನೆಯ ಅಭ್ಯರ್ಥಿಗಳಿಗೆ ಮಾತ್ರ ಬೆಂಬಲ ನೀಡುವಂತೆ ಸೂಚಿಸಿ ವಿಪ್ ಜಾರಿ ಮಾಡಲಾಗಿದೆ. ಪಟ್ಟಣ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಕಲ್ಪನಾ ಗಜಾನನ ನಾಯ್ಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮೇಶ್ವರ ನಾಯ್ಕ ಅವರಿಗೆ ಮತ ನೀಡಬೇಕು ಎಂದು ವಿಪ್’ನಲ್ಲಿ ಉಲ್ಲೇಖಿಸಲಾಗಿದೆ.
ಅಗಸ್ಟ 21ರಂದು ಚುನಾವಣೆ ನಡೆಯಲಿದ್ದು, ಅಗಸ್ಟ 16ರ ಬೆಳಗ್ಗೆ ವಿಪ್ ಜಾರಿ ಮಾಡಲಾಗಿದೆ. ಇದರೊಂದಿಗೆ ಬಿಜೆಪಿ ಬೆಂಬಲಿತ ಎಲ್ಲಾ ಸದಸ್ಯರಿಗೂ ವಿಪ್ ನೀಡಲಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮಾತ್ರ ಶಾಸಕರ ಕಚೇರಿಯ ಪ್ರವೇಶ ದ್ವಾರಕ್ಕೆ ವಿಪ್ ಅಂಟಿಸಲಾಗಿದೆ.
ಶಾಸಕರನ್ನು ಭೇಟಿ ಮಾಡಲು ಮಂಗಳವಾರ ಬಿಜೆಪಿಗರು ಅವರ ಅಧಿಕೃತ ಕಚೇರಿಗೆ ತೆರಳಿದ್ದು, ಸರ್ಕಾರಿ ಕಚೇರಿಯಲ್ಲಿ ಅವರು ಲಭ್ಯವಿರಲಿಲ್ಲ. ತಮ್ಮ ಅಧಿಕೃತ ಸರ್ಕಾರಿ ಕಚೇರಿಯಲ್ಲಿ ಶಾಸಕರು ಇಲ್ಲದ ಕಾರಣ ಬೀಗ ಹಾಕಿದ ಕಚೇರಿಗೆ ಬಿಜೆಪಿಗರು ವಿಪ್ ಅಂಟಿಸಿದ್ದಾರೆ. ಜೊತೆಗೆ ಅಂಚೆ ಮೂಲಕ ಸಹ ವಿಪ್ ರವಾನಿಸಿದ್ದಾರೆ. ಶಾಸಕರ ಕಚೇರಿ ಬಾಗಿಲು ತೆರೆಯುವುದು ಅಪರೂಪ. ಶಾಸಕರಿಂದ ತಾ ಪಂ ಅಧಿಕಾರಿಗಳ ಸಭೆ ನಡೆಯುವುದಿದ್ದರೆ ಮಾತ್ರ ಈ ಕಚೇರಿ ಬಾಗಿಲು ತೆಗೆಯುತ್ತಾರೆ.
Discussion about this post