6
  • Latest

Areca tenders | ಕೃಷಿ ಮಾರುಕಟ್ಟೆ ಮೇಲೆ ವ್ಯಾಪಾರಸ್ಥರ ಮುನಿಸು: ಅಡಿಕೆ ಬೆಳೆಗೆ ಇಲ್ಲ ಮಾರುಕಟ್ಟೆ ವ್ಯವಸ್ಥೆ!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಪಿಸ್ತೂಲ್’ ಕಥೆ ಹೇಳಲು ಹೊರಟ ಪ್ರಬಿಕ್ ಮೊಗವೀರ್!

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Sunday, July 26, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Areca tenders | ಕೃಷಿ ಮಾರುಕಟ್ಟೆ ಮೇಲೆ ವ್ಯಾಪಾರಸ್ಥರ ಮುನಿಸು: ಅಡಿಕೆ ಬೆಳೆಗೆ ಇಲ್ಲ ಮಾರುಕಟ್ಟೆ ವ್ಯವಸ್ಥೆ!

ವ್ಯಾಪಾರಸ್ಥರಿಂದ ಮುಷ್ಕರ | ಸ್ಥಗಿತಗೊಂಡ ಎಪಿಎಂಸಿ ವ್ಯವಹಾರ | ಹೀಗೆ ಮುಂದುವರೆದರೆ ಬೆಳೆಗಾರರಿಗೆ ಸಿಗಲ್ಲ ಸ್ಪರ್ಧಾತ್ಮಕ ಬೆಲೆ!

AchyutKumar by AchyutKumar
in ಸ್ಥಳೀಯ

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಗೊಂದಲ, ದಲ್ಲಾಳಿ ಹಾಗೂ ಬೆಳೆಗಾರರ ನಡುವಿನ ಕೆಲ ಅಹಿತಕರ ಘಟನೆಗಳನ್ನು ಖಂಡಿಸಿ ಯಲ್ಲಾಪುರದ ಅಡಿಕೆ ವರ್ತಕರು ಒಟ್ಟಾಗಿ ಅನಿರ್ಧಿಷ್ಟಾವಧಿ ಅವಧಿಗೆ ಅಡಿಕೆ ವಹಿವಾಟು ( Areca tenders ) ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆ ಮುಂದಿನ ನಿರ್ಣಯ ಪ್ರಕಟವಾಗುವವರೆಗೆ ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಡಿಕೆ, ಕಾಳು ಮೆಣಸು ಸೇರಿ ಯಾವುದೇ ವ್ಯಾಪಾರ-ವಹಿವಾಟು ಇರುವುದಿಲ್ಲ! S News ಡಿಜಿಟಲ್

ಕೆಲ ದಿನಗಳ ಹಿಂದೆ ಟಿಎಸ್‌ಎಸ್ ಸಂಸ್ಥೆಯಲ್ಲಿ ನಡೆದ ಅಡಿಕೆ ವ್ಯವಹಾರ ( Areca tenders ) ಸಾಕಷ್ಟು ಸದ್ದು ಮಾಡಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಗರಿಷ್ಟ ದರದಲ್ಲಿ ಅಡಿಕೆ ದರ ನಮೂದಿಸಿದರು ಅದನ್ನು ತಿದ್ದುಪಡಿ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಕೆಲ ರೈತರು ದೂರಿದ್ದರು. ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಾಗಿದೆ. ವಿಚಾರಣೆ ಮುಂದುವರೆದಿದ್ದು, ಈ ವಿಷಯ ಅಡಿಕೆಯ ಮಾನ ಹರಾಜಿಗೆ ಮೂಲ ಕಾರಣವಾಗಿದೆ.

ಪ್ರಸ್ತುತ ಈ ಎಲ್ಲಾ ಗೊಂದಲಗಳನ್ನು ಬಗೆಹರಿಸಬೇಕು ಎಂಬ ನಿಟ್ಟಿನಲ್ಲಿ ಅಡಿಕೆ ವರ್ತಕರು ಎಪಿಎಂಸಿ’ಗೆ ಪತ್ರ ನೀಡಿದ್ದಾರೆ. ದಲ್ಲಾಳಿಗಳು ಸಹ ಎಪಿಎಂಸಿ’ಗೆ ಪತ್ರ ನೀಡಿದ್ದು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ದಲ್ಲಾಲರು, ರೈತರು ಹಾಗೂ ವ್ಯಾಪಾರಸ್ಥರ ನಡುವೆ ಎಪಿಎಂಸಿ ಸೇತುವೆಯಾಗಬೇಕು ಎಂಬುದು ಮುಖ್ಯ ಅಂಬೋಣ. `ಎಲ್ಲರೂ ಸೌಹಾರ್ಧತೆಯಿಂದ ಕೂಡಿ ಬಾಳಬೇಕು. ಅಹಿತಕರ ಘಟನೆಗಳು ಮುಂದುವರೆಯಬಾರದು’ ಎಂಬುದೇ ಈ ಪ್ರತಿಭಟನೆಯ ಉದ್ದೇಶ ಎಂದು ಹಿರಿಯ ಅಡಿಕೆ ವ್ಯಾಪಾರಸ್ಥ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ಮಾಹಿತಿ ನೀಡಿದರು. S News ಡಿಜಿಟಲ್

`ಯಾವುದೇ ವ್ಯತ್ಯಾಸ ಅಥವಾ ಸಮಸ್ಯೆ ಕಂಡುಬAದರೆ ರೈತರನ್ನು ವಿಶ್ವಾಸಕ್ಕೆ ಪಡೆದು ಅವರ ಮನವರಿಕೆ ಮಾಡಬೇಕು. ವ್ಯಾಪಾರಿ ಹಾಗೂ ದಲ್ಲಾಳಿಗಳಿಗೆ ಸಹ ಅನ್ಯಾಯವಾಗಬಾರದು. `ಶಿರಸಿ-ಸಿದ್ದಾಪುರ ಭಾಗದಲ್ಲಿ ದಲ್ಲಾಲರು ಹಾಗೂ ಎಪಿಎಂಸಿ ಸಿಬ್ಬಂದಿ ಒಟ್ಟಿಗೆ ಅಡಿಕೆ ಹರಾಜು ಅಂಗಳಕ್ಕೆ ಬಂದು ಟೆಂಡರ್ ಡಿಕ್ಲರ್ ಮಾಡುತ್ತಾರೆ. ಯಲ್ಲಾಪುರದಲ್ಲಿ ಸಹ ಇದೇ ಮಾದರಿ ಜಾರಿಗೆ ಬರಬೇಕು. ಆದ ಪಾರದರ್ಶಕ ಆಡಳಿತ ಸಾಧ್ಯ’ ಎಂಬುದು ಅವರ ಅಭಿಪ್ರಾಯ.

`ಕೆಲವೊಮ್ಮೆ ಕಣ್ತಪ್ಪಿನಿಂದ ಚಾಕಾ ವ್ಯತ್ಯಾಸವಾದ ಉದಾಹರಣೆಗಳಿವೆ. ಕೆಂಪು ಅಡಿಕೆ ಪಕ್ಕದಲ್ಲಿ ಕೊಳೆ ಅಡಿಕೆ ಹಾಕಿದಾಗ ಕೆಂಪು ಅಡಿಕೆಯ ದರ ಕಣ್ತಪ್ಪಿನಿಂದ ಕೊಳೆ ಅಡಿಕೆಯ ಚಾಕಾಗೆ ಬರೆಯುವ ಸಾಧ್ಯತೆಗಳಿದ್ದು, ರೈತರಿಗೆ ಅದನ್ನು ಮನವರಿಕೆ ಮಾಡಿಕೊಡುವ ವ್ಯವಸ್ಥೆ ಬರಬೇಕು. ಆಗ ರೈತರು ಆ ಚಾಕವನ್ನು ವ್ಯಾಪಾರ ಮಾಡುವ ಅಥವಾ ರದ್ದು ಮಾಡುವ ಅವಕಾಶಗಳಿದ್ದು, ಸಹಬಾಳ್ವೆ ಸಾಧ್ಯ’ ಎಂದವರು ವಿವರಿಸಿದರು. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳಿಗೆ ಪತ್ರ ನೀಡಿದ್ದು, ಈ ಎಲ್ಲಾ ಸಮಸ್ಯೆ ಬಗೆಹರಿಸುವವರೆಗೆ ಮುಷ್ಕರ ಮುಂದುವರೆಯಲಿದೆ’ ಎಂದು ತಿಳಿಸಿದರು.

S News ಡಿಜಿಟಲ್

ShareSendTweetShare
Previous Post

Aadhaar update | ಮಕ್ಕಳ ಆಧಾರ್ ಕಾರ್ಡಿಗೆ ಬಯೋಮೆಟ್ರಿಕ್ ಕಡ್ಡಾಯ: ಈ ಕೆಲಸ ಮಾಡದೇ ಇದ್ದರೆ ಸರ್ಕಾರದ ಯೋಜನೆಗಳೇ ಸಿಗಲ್ಲ!

Next Post

Seabird | ವಿಕ್ರಮಾಧಿತ್ಯದಲ್ಲಿ ಸಚಿವ – ಸಂಸದರ ಸಮಾಗಮ: ನೌಕಾನೆಲೆ ಉದ್ಯೋಗಕ್ಕೆ ಪಟ್ಟು ಹಿಡಿದ ಕಾಗೇರಿ!

Next Post

Seabird | ವಿಕ್ರಮಾಧಿತ್ಯದಲ್ಲಿ ಸಚಿವ - ಸಂಸದರ ಸಮಾಗಮ: ನೌಕಾನೆಲೆ ಉದ್ಯೋಗಕ್ಕೆ ಪಟ್ಟು ಹಿಡಿದ ಕಾಗೇರಿ!

Municipal elections | 25 ಲಕ್ಷಕ್ಕೆ ಅಧ್ಯಕ್ಷ ಸ್ಥಾನ: ದಾಖಲೆ ಇಲ್ಲದೇ ಮಾತನಾಡಿದಕ್ಕೆ ದಾಖಲಾದ ದೂರು!

Animal huntir | ಅರಣ್ಯ ಸಿಬ್ಬಂದಿಗೆ ಸಿಕ್ಕಿದ್ದು ಮಹಾ ಬೇಟೆಗಾರ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.