ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೂ ಸಮುದಾಯದವರಿಗೆ ಸಾಲ ಸೌಲಭ್ಯ ಕಲ್ಪಿಸಿದೆ.
ವಿಶ್ವಕರ್ಮ, ಮರಾಠಾ, ವೀರಶೈವ ಲಿಂಗಾಯತ, ಒಕ್ಕಲಿಗ, ಅಲೆಮಾರಿ, ಮಡಿವಾಳ, ಸವಿತಾ, ಉಪ್ಪಾರ, ಅಂಬಿಗರ ಚೌಡಯ್ಯ ಕಾಡುಗೊಲ್ಲ, ಆರ್ಯ ವೈಶ್ಯ ನಿಗಮಗಳಿಂದ ಈ ಸಾಲ ಯೋಜನೆ ಅನುಷ್ಠಾನವಾಗುತ್ತಿದೆ. ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಉನ್ನತ ವ್ಯಾಸಂಗಕ್ಕೆ ಇಲ್ಲಿ ಸಾಲ ಸಿಗುತ್ತದೆ.
ಸಿ.ಇ.ಟಿ. ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ, ಅರಿವು ಶೈಕ್ಷಣಿಕ ಸಾಲ ಹೊಸತು ಹಾಗೂ ನವೀಕರಣ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ (ಬ್ಯಾಂಕುಗಳ ಸಹಯೋಗದೊಂದಿಗೆ), ವಿದೇಶಿ ವಿಶ್ವವಿದ್ಯಾಲಯ ಉನ್ನತ ವ್ಯಾಸಂಗ ಸಾಲ ಯೋಜನೆ, ಮಿಲಿಟ್ರಿ ಹೊಟೇಲ್ ಯೋಜನೆ (ಮರಾಠ ನಿಗಮ), ವಿಭೂತಿ ಘಟಕ ನಿರ್ಮಾಣ (ವೀರಶೈವ ಲಿಂಗಾಯತ ನಿಗಮ) ಯೋಜನೆ, ಹೊಲಿಗೆ ಯಂತ್ರ ವಿತರಣೆ ಯೋಜನೆ, (ಡಿ. ದೇವರಾಜ ಅರಸು ನಿಗಮ) ಸ್ವಾತಂತ್ರ ಅಮೃತ ಮುನ್ನಡೆ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಹುದಾಗಿದೆ.
ಆಸಕ್ತರು ಗ್ರಾಮಒನ್, ಬೆಂಗಳೂರು ಒನ್, ಕರ್ನಾಟಕ ಒನ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಪ್ಟೆಂಬರ್ 15ರವರೆಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ.