ಶಿರಸಿ: ರಾಜ್ಯದಲ್ಲಿ ಅರಣ್ಯವಾಸಿಗಳ ಅರಣ್ಯ ಭೂಮಿಯ ಹಕ್ಕಿಗೆ ಸಂಬoಧಿಸಿ ಹಾಗೂ ಅವೈಜಾನಿಕ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಇರುವ ಆಕ್ಷೇಪಗಳಿಗೆ ವಿವಿಧ ಮಠಾಧೀಶರು ಬೆಂಬಲ ನೀಡಿದ್ದಾರೆ.
ಬಾಳೆಹೊನ್ನುರು ರಂಭಾಪುರಿ ಪೀಠದ ವೀರಸೋಮೇಶ್ವರ, ಕನ್ಯಾಡಿ ಉಜರೆ ಮಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಜನರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸ್ವಾಮೀಜಿಗಳು ಸಾಮಾಜಿಕ ನ್ಯಾಯಾಲಯದ ಅಡಿಯಲ್ಲಿ ವಸತಿ ಮತ್ತು ಸಾಗುವಳಿ ಭೂಮಿಯಿಂದ ವಂಚಿತರಾಗುವ0ತ ರೈತ ಕುಟುಂಬಗಳ ಪರ ಧ್ವನಿಯಾಗಿ ನೀತಿರುವುದಕ್ಕೆ ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಕೃತಜತೆ ಸಲ್ಲಿಸಿದ್ದಾರೆ.
ರಂಭಾಪುರಿ ಮಠಾಧೀಶರು ಹಾಗೂ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಮಲೆನಾಡು ಮತ್ತು ಕರಾವಳಿ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಮಲೆನಾಡು ಭಾಗದ ಬದುಕಿನ ಹಕ್ಕಿಗಾಗಿ ಜರಗುತ್ತಿರುವ ಸಮಸ್ಯೆಗಳ ಚಿಂತನಾ ಕುಟದಲ್ಲಿ ಭಾಗವಹಿಸಿ ಅರಣ್ಯವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಬ್ರಹ್ಮಾನಂದ ಸ್ವಾಮೀಜಿ ಅವರು ಇತ್ತೀಚಿಗೆ ದಶಲಕ್ಷ ಗಿಡನೆಡುವ ಅಭಿಯಾನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸಿದ್ದರು.
S News Digitel
LIC ಸೇವೆ ಶ್ಲಾಘಿಸಿದ ಅರ್ಚಕ 
ಯಲ್ಲಾಪುರ: `ಭಾರತೀಯ ಜೀವ ವಿಮಾ ನಿಗಮದ ಬಗ್ಗೆ ಗ್ರಾಹಕರ ಅಪಾರ ವಿಶ್ವಾಸ ಹೊಂದಿದ್ದು, ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ಅಗತ್ಯ’ ಎಂದು ಎಲ್‌ಐಸಿ ಗ್ರಾಹಕರು ಆಗಿರುವ ವೆಂಕಟರಮಣ ಮಠದ ಅರ್ಚಕ ನಾರಾಯಣ ಭಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ನಿಗಮದ ಕಚೇರಿಯಲ್ಲಿ `ಎಲ್‌ಐಸಿ 68ನೇ ವರ್ಷ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಎಲ್‌ಐಸಿ ಪ್ರತಿನಿಧಿಗಳು ಕಣ್ಣಿಗೆ ಕಾಣದ ವ್ಯವಹಾರವಾಗಿದ್ದರೂ ಮಾತುಗಾರಿಕೆಯಿಂದಲೇ ಹೆಚ್ಚಿನ ವಿಮಾ ವ್ಯವಹಾರ ಮಾಡುತ್ತಾರೆ. ದೇಶದ ಅಭಿವೃದ್ದಿಯಲ್ಲಿ ಎಲ್‌ಐಸಿ ಕೊಡುಗೆ ಅಪಾರ’ ಎಂದರು.
ಶಾಖಾಧಿಕಾರಿ ಗೋಪಾಲಕೃಷ್ಣ ಆಚಾರಿ ಮಾತನಾಡಿ, `ನಿಗಮದಿಂದ ಪ್ರತಿ ವರ್ಷ 7 ದಿನಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ನಿಗಮ ಬೆಳವಣಿಗೆಗೆ ಸೇವಾ ಮನೋಭಾವನೆ ಕಾರಣ’ ಎಂದರು. ನಿವೃತ್ತ ವಿಮಾ ಅಭಿವೃದ್ಧಿ ಅಧಿಕಾರಿ ರವೀಂದ್ರ ಪ್ರಭು ಮಾತನಾಡಿ `ಎಲ್‌ಐಸಿ ಸರ್ಕಾರಕ್ಕೆ 4 ಸಾವಿರ ಕೋಟಿ ಲಾಭ ನೀಡುವ ಮಟ್ಟಿಗೆ ಬೆಳೆದಿದೆ. ಇದು ಬ್ರಷ್ಟಾಚಾರರಹಿತ ಸಂಸ್ಥೆ’ ಎಂದರು.
ಗ್ರಾಹಕರಾದ ಮಲವಳ್ಳಿಯ ರಾಮಾ ಗೌಡ ದೀಪ ಬೆಳಗಿಸಿದರು.
ಆಡಳಿತಾಧಿಕಾರಿ ಜಿ.ವಿ.ಭಟ್ಟ ಪ್ರಸಾದ, ಅಭಿವೃದ್ಧಿ ಅಧಿಕಾರಿಗಳಾದ ರಾಘವೇಂದ್ರ ಕಣಗಿಲ್, ಮಧುಕೇಶ್ವರ ಹೆಗಡೆ, ಕೌಶಿಕ್ ನದಾಫ್, ಪ್ರತಿನಿಧಿಗಳಾದ ಆರ್.ಎನ್.ಕೋಮಾರ್. ಡಿ.ಜಿ.ಭಟ್ಟ, ರಾಘವೇಂದ್ರ ಪೂಜಾರಿ, ಗುರಪ್ಪನವರ್, ಅಲ್ಲದೇ ಸುಧೀಂದ್ರ ಪೈ, ನೀಲವ್ವ ಇದ್ದರು. ಎನ್.ವಿ.ಸಭಾಹಿತ ಸ್ವಾಗತಿಸಿದರು. ಶಂಕರ ಭಟ್ಟ ತಾರೀಮಕ್ಕಿ ವಂದಿಸಿದರು.
ಸೆ.4: ಹೊನ್ನಾವರಕ್ಕೆ ಇಲ್ಲ ಕರೆಂಟು
ಹೊನ್ನಾವರ: 110ಕೆವಿ ನಿರ್ವಹಣೆಯ ಕೆಲಸದ ಅಂಗವಾಗಿ ಹೊನ್ನಾವರ ಪಟ್ಟಣ ಶಾಖೆ, ಗ್ರಾಮೀಣ ಶಾಖೆ, ಕಾಸರಕೋಡ ಶಾಖೆ, ಮಂಕಿ ಹಾಗೂ ಗೇರುಸೊಪ್ಪ ಶಾಖಾ ವ್ಯಾಪ್ತಿಯ ಎಲ್ಲಾ ಫೀಡರುಗಳಲ್ಲಿ ಸೆ.4ರಂದು ವಿದ್ಯುತ್ ಸರಬರಾಜು ಇರುವುದಿಲ್ಲ.
ಅಂದು ಬೆಳಿಗ್ಗೆ 10ಗಂಟೆಯಿAದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಇದರೊಂದಿಗೆ ಅದೇ ದಿನ ಲೈನ್ ನಿರ್ವಹಣೆ ನಿಮಿತ್ತ ಹೊನ್ನಾವರ ಪಟ್ಟಣದ 11ಕೆವಿ ಬಂದರು ಫೀಡರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.
S News Digitel
IAS ಕನಸು ಕಂಡವರಿಗೆ ಶಿಕ್ಷಣಾಧಿಕಾರಿ ಪಾಠ!

ಶಿರಸಿ: `ಪರಿಸರದಲ್ಲಿನ ಸೂಕ್ಷ್ಮತೆ ಗಮನಿಸುವುದು IAS ಅಧಿಕಾರಿಯಾಗುವವರ ಮೊದಲ ಹೆಜ್ಜೆ. ಸ್ಪರ್ಧಾ ಮನೋಭಾವನೆ ಬೆಳಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಧ್ಯ’ ಎಂದು ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಹೇಳಿದರು.
ಎಂಇಎಸ್ ಚೈತನ್ಯ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಮುತ್ಕರ್ಷ ಪ್ರಿ-ಐಎಎಸ್ ಫೌಂಡೇಶನ್ ತರಗತಿ ಉದ್ಘಾಟಿಸಿ ಮಾತನಾಡಿದ ಅವರು `ಪ್ರತಿ ವಿದ್ಯಾರ್ಥಿಯೂ ತಾವು ಕಂಡ ಕನಸು ಈಡೇರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು. ಕಂಡ ಕನಸಿನ ಬೆನ್ನತ್ತಿ, ಅದಕ್ಕೆ ತಕ್ಕ ಕಲಿಕೆ ಶುರು ಮಾಡಬೇಕು. ಓದಿನ ಜೊತೆ ಆಟ-ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯ’ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಕೆ.ಬಿ.ಲೋಕೇಶ್ ಹೆಗಡೆ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭುಲಿAಗ ಹೆಗಡೆ, ಎಂಇಎಸ್ ಚೈತನ್ಯ ಪಿಯು ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಹೆಗಡೆಕಟ್ಟೆ ಮಾತನಾಡಿದರು. ಅನಿಲ್ ನಾಯಕ್ ಸ್ವಾಗತಿಸಿದರು. ಪವನ್ ಹೆಗಡೆ ವಂದಿಸಿದರು. ಸಂಧ್ಯಾ ಶಾಸ್ತ್ರೀ ನಿರ್ವಹಿಸಿದರು.
S News Digitel
ಜನನಿ ಮ್ಯೂಸಿಕ್’ನಿಂದ ಕೃಷ್ಣ ಸಂಗೀತ: ಗಮನ ಸೆಳೆದ ಗಾನಾಮೃತ

ಶಿರಸಿ: ನಗರದ ರಾಘವೇಂದ್ರ ಮಠದಲ್ಲಿ ಶ್ರೀಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಜನನಿ ಮ್ಯೂಸಿಕ್ ಸಂಸ್ಥೆಯವರಿoದ ನಡೆದ `ಶ್ರೀಕೃಷ್ಣ ಗಾನಾಮೃತ’ ಗಮನ ಸೆಳೆಯಿತು.
ಶ್ರೀಮಠದ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಡಿ. ಮಾಡಗೇರಿ ಹಾಗೂ ಪ್ರಧಾನ ಅರ್ಚಕರಾದ ಸುಬ್ಬಣ್ಣ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದ್ದು, ವಿದೂಷಿ ರೇಖಾ ದಿನೇಶ ಗಾಯನಗಳನ್ನು ಪ್ರಸ್ತುತಪಡಿಸಿದರು.
ಕಲ್ಲಾರೆಮನೆಯ ಪ್ರಕಾಶ ಹೆಗಡೆ ಕೊಳಲು ನುಡಿಸಿದರು. ಹಾರ್ಮೊನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ, ತಬಲಾದಲ್ಲಿ ಗಣೇಶ ಗುಂಡ್ಕಲ್ ಹಾಗೂ ರಿದಮ್ ಪ್ಯಾಡ್’ನಲ್ಲಿ ಉದಯ ಭಂಡಾರಿ, ಹಿನ್ನಲೆಯ ತಾನ್ಪುರಾದಲ್ಲಿ ಸ್ನೇಹಾ ಅಮ್ಮಿನಳ್ಳಿ, ಮಾನಸ ಹೆಗಡೆ ಸಹಕರಿಸಿದರು.
ಇದಕ್ಕೂ ಪೂರ್ವದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಗಣೇಶ ಕೂರ್ಸೆ, ಪ್ರಭಾಕರ ಹೆಗಡೆ, ಗಣೇಶ ಹೆಗಡೆ, ದಿನೇಶ ಭಾಗ್ವತ, ರಾಘವೇಂದ್ರ ಸಕಲಾತಿ, ಅಮೀತ ಹಿರೇಮಠ, ವಿಕ್ರಮ ಮೊದಲಾದವರು ಗುಂಪು ಹಾಡುಗಳನ್ನು ಪ್ರಸ್ತುತಪಡಿಸಿದರು. ರೇಖಾ ಭಟ್ಟ ನಾಡಗುಳಿ, ಪ್ರಥ್ವಿ ಹೆಗಡೆ, ಚೈತ್ರಾ ಹೆಗಡೆ, ಆಶಾ ಕೆರೆಗದ್ದೆ, ರೇಷ್ಮಾ ಶೆಟ್ ಮೊದಲಾದವರು ತಮ್ಮ ಕಂಠಸಿರಿ ಪ್ರದರ್ಶಿಸಿದರು.
ದಿನೇಶ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಹಾಗೂ ಸುಮನಾ ಹೆಗಡೆ ನಿರ್ವಹಿಸಿದರು.
S News Digitel



