ಕುಮಟಾ: ಧಾರೇಶ್ವರ ಬಳಿಯ ಮಠದ ಸಮೀಪ ನಾಲ್ಕು ವಾಹನಗಳಿಗೆ ಗುದ್ದಿದ ಕಂಟೇನರ್ ಚಾಲಕ ಕೊನೆಗೆ ತನ್ನ ವಾಹನವನ್ನು ಪಲ್ಟಿ ಮಾಡಿದ್ದಾನೆ. ಈ ಸರಣಿ ಅಪಘಾತದಲ್ಲಿ ಒಟ್ಟು ಐದು ವಾಹನಗಳು ಜಖಂ ಆಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕಂಟೇನರ್ ಚಾಲಕ ನಿದ್ದೆಗಣ್ಣಿನಲ್ಲಿ ವಾಹನ ಓಡಿಸಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ!
ಸೋಮವಾರ ಕುಮಟಾದಿಂದ ಹೊನ್ನಾವರ ಕಡೆ ಹೊರಟಿದ್ದ ಕಂಟೇನರ್ ಚತುಷ್ಪದ ರಸ್ತೆ ಅಂಚಿನಲ್ಲಿ ನಿಂತಿದ್ದ ವಾಹನಗಳಿಗೆ ಗುದ್ದಿದೆ. ಬೆಳಗಾವಿ ವೈಭವನಗರದ ಸಿದ್ರಾಮಯ್ಯ ಫಕೀರಪ್ಪ ಬನ್ನೂರ ಕಂಟೇನರ್ ಓಡಿಸುತ್ತಿದ್ದ. ಈ ಅಪಘಾತದಲ್ಲಿ ಪ್ರಯಾಣಿಕರ ರಿಕ್ಷಾ, ಲಗೇಜ್ ರಿಕ್ಷಾ ಹಾಗೂ ಬೈಕ್ ಜಖಂ ಆಗಿದೆ. ಜಖಂಗೊoಡ ರಿಕ್ಷಾದ ಮಾಲಕರರಲ್ಲಿ ಒಬ್ಬರಾದ ಗಣೇಶ ಮಂಜುನಾಥ ನಾಯ್ಕ ಕಂಟೇನರ್ ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ದೂರುದಾರ ಗಣೇಶ ಮಂಜುನಾಥ ನಾಯ್ಕ, ಚಿದಾನಂದ ಮಹಾಬಲೇಶ್ವರ ನಾಯ್ಕ ಹಾಗೂ ಭರತ ಪಾಂಡುರoಗ ನಾಯ್ಕ ಎಂಬಾತರ ವಾಹನದ ಜೊತೆ ಅಪರಿಚಿತ ವ್ಯಕ್ತಿಯ ಇನ್ನೊಂದು ಬೈಕ್ ಹಾನಿಗೆ ಒಳಗಾಗಿದೆ. ಕಂಟೇನರ್ ಚಾಲಕ ಸಿದ್ರಾಮಯ್ಯ ಫಕೀರಪ್ಪ ಬನ್ನೂರ ಜೊತೆ ಕಂಟೇನರ್ ಕ್ಲಿನರ್ ಆಗಿದ್ದ ರಾಯಚೂರನ ಪ್ರಸನ್ನ ರಾಮಣ್ಣ’ನಿಗೂ ಪೆಟ್ಟಾಗಿದೆ. ಈ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.
ಪಿಎಸ್‌ಐ ರವಿ ಗುಡ್ಡಿ ದಾಖಲಿಸಿಕೊಂಡಿದ್ದಾರೆ.



