ಶಿರಸಿ: ಶಿವಳ್ಳಿ ಗ್ರಾಮದ ಕಾನಳ್ಳಿ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಸುವನ್ನು ಕೊಂದಿದ್ದಾರೆ.
ಮಂಜುನಾಥ ದೇವೇಗೌಡ ಎಂಬಾತರಿಗೆ ಸೇರಿದ ಹಸು ಗುಂಡೇಟಿಗೆ ಬಲಿಯಾಗಿದೆ. ಜಾನುವಾರು ಮೇವು ಅರೆಸಿ ಕಾಡಿಗೆ ಹೋದಾಗ ದಾಳಿ ನಡೆಸಿದ ದುಷ್ಕರ್ಮಿಗಳು ಹಸು ಸಾವನಪ್ಪಿರುವುದನ್ನು ಅರಿತು ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಶೋಧ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ದಯಾನಂದ್ ಜೋಗಳೇಕರ್ ಆರೋಪಿಗಳ ಹುಡುಕಾಟ ಮುಂದುವರೆಸಿದ್ದಾರೆ.