ಕಾರವಾರ ಶೈಕ್ಷಣಿಕ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದ್ದು, ಒಟ್ಟು 15 ಶಿಕ್ಷಕರು ಈ ಬಾರಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣನಿಧಿ ಸೆ 5ರಂದು ಶಿಕ್ಷಕರ ದಿನಾಚರಣೆಯಂದು ಈ ಪ್ರಶಸ್ತಿ ನೀಡಲಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶೈಲಾ ಸದಾನಂದ ಆಚಾರಿ, ಸಹ ಶಿಕ್ಷಕಿ ಸ.ಕಿ.ಪ್ರಾ.ಶಾ.ಹಬ್ಬುವಾಡ ತಾ:ಕಾರವಾರ, ರೇಣುಕಾ ಹೊನ್ನಪ್ಪ ನಾಯಕ, ಸ.ಕಿ.ಪ್ರಾ.ಶಾಲೆ ಬೆಳಸೆ ನಂ 2 ಶಿರೂರು ಕ್ಲಸ್ಟರ್ ಅಂಕೋಲ, ವಿದ್ಯಾಧರ ವೆಂಕಟ್ರಮಣ ಅಡಿ, ಸ.ಕಿ.ಪ್ರಾ.ಶಾಲೆ, ಕೆಳಗಿನ ಕಂದೊಳ್ಳಿ, ಕುಮಟಾ, ಶಾರದಾ ನಾಯ್ಕ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುರಕಳಿ ಖರ್ವಾ ತಾ.ಹೊನ್ನಾವರ, ರಾಮಚಂದ್ರ ದೇವಣ್ಣ ನಾಯಕ, ಸಹ ಶಿಕ್ಷಕರು, ಸ.ಕಿ, ಪ್ರಾ.ಕ.ಶಾಲೆ ನರೇಕುಳಿ ತಾ: ಭಟ್ಕಳ ಅವರು ಉತ್ತಮ ಶಿಕ್ಷಕರು ಎಂದು ಗುರುತಿಸಿಕೊಂಡಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವೀಣಾ ಆನಂದು ಗುನಗಿ, ಸಹ ಶಿಕ್ಷಕರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವಗಡ, ಕಾರವಾರ, ಚಂದ್ರಕಲಾ ಗಣಪತಿ ನಾಯಕ, ಸ.ಶಿ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡ ಬೇಲೇಕೇರಿ ತಾ.ಅಂಕೋಲಾ, ಮಂಗಲಾ ಕೃಷ್ಣ ನಾಯ್ಕ, ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ, ತಾ:ಕುಮಟಾ, ಉದಯ ರಾಮಚಂದ್ರ ನಾಯ್ಕ, ಮುಖ್ಯಾಧ್ಯಾಪಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಮಡಿ ತಾ:ಹೊನ್ನಾವರ , ಹೇಮಾವತಿ ಎಸ್. ನಾಯ್ಕ ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ತಾ: ಭಟ್ಕಳ ಅವರು ಉತ್ತಮ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಸ್ಮಿತಾ ಆತ್ಮಾರಾಮ ನಾಯ್ಕ, ಸಹ ಶಿಕ್ಷಕಿ ಸರಕಾರಿ ಪ್ರೌಢಶಾಲೆ ತೋಡೂರು, ಎಸ್.ನಾಗರಾಜ ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಬೇಲೇಕೇರಿ, ತಾ.ಅಂಕೋಲ, ಮಡಿವಾಳಪ್ಪ ಶಿವಪ್ಪ ದೊಡಮನಿ, ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ಶಾಂತಿಕಾoಬ – ಪ್ರೌಢಶಾಲೆ ಹೆಗಡೆ ತಾ:ಕುಮಟಾ , ಲಂಬೋದರ ಮಂಜುನಾಥ ಹೆಗಡೆ ಮುಖ್ಯ ಶಿಕ್ಷಕರು ಶ್ರೀ ಚನ್ನಕೇಶವ ಪ್ರೌಢಶಾಲೆ ಕರ್ಕಿ, ತಾ:ಹೊನ್ನಾವರ, ಡಾ.ಸುರೇಶ ಎಂ. ತಾಂಡೇಲ ಸ.ಶಿ. ಸರಕಾರಿ ಪ್ರೌಢಶಾಲೆ ಕುಂಟವಾಣಿ ತಾ. ಭಟ್ಕಳ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.



