ಜೋಯಿಡಾ: ಗಣೇಶಗುಡಿಯ ಸೂಪಾ ಜಲಾಶಯದ ಹಿನ್ನೀರು ಹೆಚ್ಚಾದ ಪರಿಣಾಮ ಡಿಗ್ಗಿ ಮುಖ್ಯ ರಸ್ತೆ ಮುಳುಗಡೆಯಾಗಿದೆ.
ಡಿಗ್ಗಿ – ದುಧಮಳಾ ಹತ್ತಿರ ಕಾಳಿ ನದಿಗೆ ಕಟ್ಟಲಾಗಿರುವ ಸೇತುವೆಯ ಎರಡು ಬದಿ ಸಂಪರ್ಕ ರಸ್ತೆ ಮುಳುಗಡೆಯಾಗಿದೆ. ಸೇತುವೆಗೆ 6 ಕೋಟಿ ರೂ ಖರ್ಚು ಮಾಡಿದರೂ ಎರಡು ಕಡೆಗಳಲ್ಲಿ ರಸ್ತೆ ಮೇಲೆ ನೀರು ನಿಲ್ಲದ ಹಾಗೇ ಮಾಡಿಲ್ಲ. ಹಿನ್ನೀರು ನಿಂತ ಪರಿಣಾಮ ಗೋವಾ ಸೇರಿದಂತೆ ಡಿಗ್ಗಿ, ದುಧಮಳಾ, ಬೊಂಡೇಲಿ, ಶಿಸೈ, ಕಣ್ಣೆ, ಮಾಯರೇ, ಸೋಲಿಯೆ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ಕಾಡು ಹಂದಿ ದಾಳಿಗೆ ಇಲ್ಲ ಕೊನೆ
ಯಲ್ಲಾಪುರ: ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧೆಡೆ ಕಾಡು ಹಂದಿಗಳ ಉಪಟಳ ಜೋರಾಗಿದೆ. ತೋಟಕ್ಕೆ ದಾಳಿ ಮಾಡುವ ಕಾಡು ಹಂದಿ ವಿವಿಧ ಬೆಳೆಗಳನ್ನು ಹಾನಿ ಮಾಡುತ್ತಿದೆ.
ಅಡಿಕೆ ಗಿಡ, ಕೆಸು, ಶುಂಠಿ, ಅರಿಶಿನ, ಬಾಳೆ ಗಿಡಗಳು ಹಂದಿ ಪಾಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಕುಕಿದ್ದಾರೆ. ಹಂದಿಗಳು ಬಾಳೆ ಗಿಡಗಳ ಮನಬಂದoತೆ ಸಿಗಿದು ಹಾಕುತ್ತ ಬಾಳೆ ಗಿಡ ನಾಶ ಮಾಡುತ್ತಿವೆ. ಅಡಿಕೆ ಜೊತೆ ಬಾಳೆಗೂ ಇದೀಗ ಉತ್ತಮ ಬೆಲೆಯಿದ್ದು, ಫಸಲು ಮಾತ್ರ ರೈತರ ಕೈಗೆ ಸಿಗುತ್ತಿಲ್ಲ. ತೋಟದಲ್ಲಿ ರಾತ್ರಿ ವೇಳೆ ಬಿದ್ದ ತೆಂಗಿನ ಕಾಯಿಗಳು ಬೆಳಗಾಗುವುದರೊಳಗೆ ಹಂದಿ ಪಾಲಾಗುತ್ತಿದೆ.
S News Digitel
ಕಸ್ತೂರಿ ರಂಗನ್ ವಿರೋಧಿಸಿ ಬೆಂಗಳೂರು ಚಲೋ!
ಜೋಯಿಡಾ: ಕಸ್ತೂರಿ ರಂಗನ್ ವರದಿ ಆಧರಿಸಿ ಘೋಷಿಸಿರುವ ಕರಡು ಅಧಿಸೂಚನೆ ಹಾಗೂ ಸಚಿವರ ಅತಿಕ್ರಮಣ ತೆರವು ನಿರ್ಧಾರ ವಿರೋಧಿಸಿ ಬೆಂಗಳೂರಿಗೆ ತೆರಳಲು ಕಾಳಿ ಬ್ರಿಗೇಡ್ ನಿರ್ಣಯಿಸಿದೆ.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮ ಮಾಡುವ ಮೂಲಕ ಈ ಕರಡು ಅಧಿಸೂಚನೆ ವಿರೋಧಿಸಿ ಠರಾವು ಮಾಡಿ, ತಕರಾರು ಸಲ್ಲಿಸುವುದು. ಪ್ರತಿಯೊಬ್ಬರೂ ಇದಕ್ಕೆ ತಕರಾರು ಸಲ್ಲಿಸಲು ಜಾಗೃತಿ ಮೂಡಿಸುವ ನಿರ್ಣಯಿಸಲಾಗಿದೆ. `ಎಲ್ಲರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ. ಸರ್ಕಾರ ಕಠಿಣ ಕಾನೂನುಗಳಿಂದ ಜೋಯಿಡಾ ತಾಲೂಕಿಗೆ ವಿನಾಯಿತಿ ನೀಡಬೇಕು. ಇದಕ್ಕಾಗಿ ತಾವು ಯಾವುದೇ ಹೋರಾಟಕ್ಕೆ ಸಿದ್ಧ’ ಎಂದು ಸಭೆಯಲ್ಲಿದ್ದವರು ಹೇಳಿದರು.
ಸೆ 4ರಂದು ಸಂಜೆ 4 ಗಂಟೆಗೆ ಗ್ಯಾರಂಟಿ!
ಯಲ್ಲಾಪುರ: ಪಟ್ಟಣದ ತಾ.ಪಂ ಆವಾರದಲ್ಲಿ ತಾಲೂಕಾ ಗ್ಯಾರಂಟಿಗಳ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮ ಸೆ 4ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಕಾರ್ಯಾಲಯ ಉದ್ಘಾಟಿಸಲಿದ್ದಾರೆ. ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ಶಾಸಕ ಶಿವರಾಮ ಹೆಬ್ಬಾರ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ತಾಲೂಕಾ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಭಾಗವಹಿಸಲಿದ್ದಾರೆ.
S News Digitel
ಯಕ್ಷ ಅಕಾಡೆಮಿಗೆ ಜಲವಳ್ಳಿ ಆಯ್ಕೆ
ಹೊನ್ನಾವರ: ಕರ್ನಾಟಕ ಯಕ್ಷಗಾನ ಅಖಾಡಮಿಯ ಸಹ ಸದಸ್ಯರನ್ನಾಗಿ ಯಕ್ಷಗಾನ ಕಲಾವಿದ ವಿದ್ಯಾದರ ಜಲವಳ್ಳಿ ಆಯ್ಕೆಯಾಗಿದ್ದಾರೆ.
ನೂತನ ಸಹ ಸದಸ್ಯರ ಅಧಿಕಾರವದಿ ಮೂರು ವರ್ಷದವರೆಗೆ ಇರಲಿದೆ.
ನೌಕರರ ಸಂಘಕ್ಕೆ ನೂತನ ಅಧ್ಯಕ್ಷ
ಯಲ್ಲಾಪುರ: ರಾಜ್ಯ ಸರಕಾರಿ ನಿವೃತ್ತ ನೌಕರರ ಯಲ್ಲಾಪುರ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಎಸ್.ಎಲ್. ಜಾಲಿಸತ್ಗಿ ಅಧಿಕಾರ ಸ್ವೀಕರಿಸಿದರು.
ಮಂಗಳವಾರ ನಿರ್ಗಮಿತ ಅಧ್ಯಕ್ಷ ಶ್ರೀರಂಗ ಕಟ್ಟಿಯವರು ಅಧಿಕಾರ ಹಸ್ತಾಂತರ ಮಾಡಿದರು. ಈ ವೇಳೆ ತಮ್ಮ ಅಧಿಕಾರ ಅವಧಿಯಲ್ಲಿ ಸಂಘದಿoದ ಕೈಗೊಳ್ಳಲಾದ ಚಟುವಟಿಕೆಗಳ ಬಗ್ಗೆ ಶ್ರೀರಂಗ ಕಟ್ಟಿ ಅವರು ವಿವರ ನೀಡಿದರು. ನಿವೃತ್ತ ನೌಕರರು ಸದಾ ಚಟುವಟಿಕೆಯಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಅವರು ಕರೆ ನೀಡಿದರು.
ಸುರೇಶ ಬೋರಕರ, ಆರ್.ಎನ್.ನಾಯ್ಕ ಮತ್ತು ಶ್ರೀಮತಿ ಶೋಭಾ ಶೆಟ್ಟಿ ಸಂಘದ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಿದರು. ನಿರ್ಗಮಿತ ಕಾರ್ಯದರ್ಶಿ ಸುರೇಶ ಬೋರಕರ ತಮ್ಮ ಅಧಿಕಾರಾವಧಿಯಲ್ಲಿನ ಜಮಾ- ಖರ್ಚಿನ ವಿವರ ನೀಡಿದರು. ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕೆ.ಕೆ.ನಾಯ್ಕ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ನೂತನ ಕಾರ್ಯದರ್ಶಿ ಗೋಪಾಲ ನೇತ್ರೇಕರ ವಂದಿಸಿದರು. ಈ ಸಂದರ್ಭದಲ್ಲಿ ಎಂಟು ನಿವೃತ್ತ ನೌಕರರು ಸಂಘದ ಸದಸ್ಯತ್ವ ಪಡೆದರು.
S News Digitel
ಶಿರಸಿ ಕಾಲೇಜಿನಲ್ಲಿ ಉದ್ಯೋಗ ಮೇಳ: 200 ಜನ ಭಾಗಿ
ಶಿರಸಿ: ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವಿಧ ಸಂಘ-ಸoಸ್ಥೆ ಸಹಯೋಗದಲ್ಲಿ ಉದ್ಯೋಗ ಮೇಳ ನಡೆಯಿತು.
ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಉಪಸಮಿತಿ ಅಧ್ಯಕ್ಷ ವರೀಂದ್ರ ಸುಧಾಕರ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ.ಆರ್. ಭಟ್ ಅಸ್ಮಿತೆ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್, ಕ್ಯುಸೆಸ್ ಕಾರ್ಪೊರೇಷನ್ ಕಂಪನಿಯ ವೆಂಕಟೇಶ್ ಮೂರ್ತಿ ಜಿನೇಂದ್ರ ಜೈನ್, ಶರತ್ ಕುಮಾರ್, ಬಸವರಾಜ್, ಗ್ರೀನ್ ಕೇರ್ ಸಂಸ್ಥೆಯ ಪ್ರಶಾಂತ್ ಮುಳೆ, ಜಿತೇಂದ್ರ ಕುಮಾರ್ ಆರ್.ಎಂ. ಮತ್ತು ಸಂಕಲ್ಪ ಟ್ರಸ್ಟ್ ಕುಮಾರ್ ಪಟಗಾರ ಉಪಸ್ಥಿತರಿದ್ದರು.
ಈ ಉದ್ಯೋಗ ಮೇಳದಲ್ಲಿ 200ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.